ಶಿವಾಜಿನಗರ ತರವಾಡು‌ಮನೆ ದೈವಸ್ಥಾನಲ್ಲಿ ವಾರ್ಷಿಕ ಕೋಲೋತ್ಸವ : ಲಕ್ಕಿಕೂಪನ್ ಬಿಡುಗಡೆ

0

ಶಿವಾಜಿನಗರ ತರವಾಡು ಶ್ರೀ ಧರ್ಮದೈವ ಹಾಗೂ ಸಹಪರಿವಾರ ದೈವಗಳ ದೈವಸ್ಥಾನದಲ್ಲಿ ಮಾರ್ಚ್ 2 – 3 ತಾರೀಕಿನಂದು ನಡೆಯಲಿರುವ ಪ್ರಥಮ ವರ್ಷದ ವಾರ್ಷಿಕೋಲೋತ್ಸವದ ಅಂಗವಾಗಿ ಲಕ್ಕ್ ಡಿಪ್ ನ್ನು ಡಿ.30 ರಂದು ದೈವಸ್ಥಾನದ ಮುಂಭಾಗದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪುತ್ತೂರು, ಪ್ರಧಾನ ಕಾರ್ಯದರ್ಶಿ ಸುನಿಲ್ ಶಿವಾಜಿನಗರ ಜೊತೆ ಕಾರ್ಯದರ್ಶಿ ಶಿವರಾಮ್ ಪಾನತ್ತಿಲ, ವಿಶ್ವನಾಥ ಮಾವಿನಪಲ್ಲ, ರಾಮ ನೆಹರು ನಗರ, ಸುಂದರ ಮಡಿವಾಳಮೂಲೆ, ಮಲ್ಲೇಶ್ ಕರಿಯಮೂಲೆ, ಅವಿನಾಶ್ ಉಬರಡ್ಕ,ವಿಶ್ವನಾಥ ಶಿವಾಜಿನಗರ,ಬಾಬು ಮಾರ್ಗ ಉಪಸ್ಥಿತರಿದ್ದರು