ಗುತ್ತಿಗಾರು:ಅಪಘಾತದಲ್ಲಿ ಗಾಯಗೊಂಡಿದ್ದ ಕಿಶೋರ್ ಪೈಕ ಆಸ್ಪತ್ರೆಯಿಂದ ಡಿಸ್ಚಾರ್ಜ್

0

ಡಿ.29 ರಂದು ಸಂಜೆ ಗುತ್ತಿಗಾರಿನಲ್ಲಿ ಕಾರು ಗುದ್ದಿದ ಕಾರಣ ಜಖಂಗೊಂಡಿದ್ದ ಕಿಶೋರ್ ಕುಮಾರ್ ಪೈಕ ಬೊಮ್ಮದೇರೆ ಅವರು ಡಿಸ್ಚಾರ್ಜ್ ಆಗಿರುವುದಾಗಿ ತಿಳಿದು ಬಂದಿದೆ.

ಕಿಶೋರ್ ಅವರು ಗುತ್ತಿಗಾರು ಸಹಕಾರಿ ಮಾರ್ಟ್ ಗೆ ತೆರಳಿ ಬೈಕ್ ನಲ್ಲಿ ಮುಖ್ಯ ರಸ್ತೆಗೆ ಬಂದು ತರಕಾರಿ ಅಂಗಡಿಗೆ ಹೋಗಲೆಂದು ಬಲ ಬದಿಗೆ ತಿರುಗಿಸಿದಾಗ ಹಿಂದಿನಿಂದ ಬಂದ ತುಪ್ಪದಮನೆ ಮಿಥುನ್ ಎಂಬವರ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕಿಶೋರ್ ಅವರು ರಸ್ತೆಗೆ ಎಸೆಯಲ್ಪಟ್ಟು ಹಣೆಯ ಭಾಗಕ್ಕೆ ಗಾಯವಾಗಿತ್ತು. ದೇಹದ ಕೆಲ ಭಾಗಗಳಿಗೆ ಕೂಡ ಸಣ್ಣ ಪುಟ್ಟ ಗಾಯಗಳಾಗಿದ್ದವು. ತಕ್ಷಣ ಅವರನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆಯ ಬಳಿಕ ಗಾಯಾಳುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಕರಣವನ್ನು ರಾಜಿಯಲ್ಲಿ ಮುಗಿಸಲಾಗಿದೆ ಎಂದು ತಿಳಿದು ಬಂದಿದೆ.