ಜ.07,08 : ಬೆಳ್ಳಾರೆ ಕೊಳಂಬಳ ಶ್ರೀ ರಕ್ತೇಶ್ವರಿ ದೇವಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ

0

ಶ್ರೀ ರಕ್ತೇಶ್ವರಿ ದೇವಿ,ವರ್ಣಾರ ಪಂಜುರ್ಲಿ,ಕಲ್ಲುರ್ಟಿ ,ಕುಪ್ಪೆ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ

ಬೆಳ್ಳಾರೆ ಗ್ರಾಮದ ದೇವಿನಗರ – ಕೊಳಂಬಳ (ಉಮಿಕ್ಕಳ) ದಲ್ಲಿ ಶ್ರೀ ರಕ್ತೇಶ್ವರಿ ದೇವಿ,ವರ್ಣಾರ ಪಂಜುರ್ಲಿ ,ಕಲ್ಲುರ್ಟಿ,ಕುಪ್ಪೆ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವವು ದೇರೆಬೈಲು ತಂತ್ರಿ ಪತಂಜಲಿ ಶಾಸ್ತ್ರೀ ಮುಕ್ಕೂರು ಇವರ ನೇತೃತ್ವದಲ್ಲಿ ಜ.7 ಮತ್ತು ಜ.08 ರಂದು ನಡೆಯಲಿದೆ.


ಜ.07 ರಂದು ಬೆಳಿಗ್ಗೆ ಗಂಟೆ 8.00 ಕ್ಕೆ ಸ್ವಸ್ತಿ ಪುಣ್ಯಾಹ,ಗಣಪತಿ ಹೋಮ,ಗಂಟೆ 9.00 ಕ್ಕೆ ಗೊನೆ ಕಡಿಯುವುದು,ಗಂಟೆ 10.00 ಕ್ಕೆ ನಾಗತಂಬಿಲ,ಗಂಟೆ 11.00 ಕ್ಕೆ ಶ್ರೀ ರಕ್ತೇಶ್ವರಿ ದೇವಿಯ ತಂಬಿಲ,ಸಂಜೆ ಗಂಟೆ 4.00 ಕ್ಕೆ ಭಂಡಾರ ತೆಗೆಯುವುದು ರಾತ್ರಿ ಗಂಟೆ 6.00 ಕ್ಕೆ ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ಕೊಳಂಬಳ ಬೆಳ್ಳಾರೆ ಇವರಿಂದ ಭಜನಾ ಕಾರ್ಯಕ್ರಮ,ಗಂಟೆ 8.00 ಕ್ಕೆ ರಕ್ತೇಶ್ವರಿ ದೇವಿಯ ನೇಮೋತ್ಸವ ನಡೆಯಲಿದೆ.8.30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 12.00 ಕ್ಕೆ ವರ್ಣಾರ ಪಂಜುರ್ಲಿ ನೇಮೋತ್ಸವ ನಡೆಯಲಿದೆ.


ಜ.08 ರಂದು ಸಂಜೆ ಗಂಟೆ 6.00 ಕ್ಕೆ ಸುಮಾ ವಿ.ಆಚಾರ್ ಕಿಲಂಗೋಡಿ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 8.00 ಕ್ಕೆ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ.


ರಾತ್ರಿ ಗಂಟೆ 8.30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 10.00 ಕ್ಕೆ ಕುಪ್ಪೆಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೈವಗಳ ಪ್ರಸಾದವನ್ನು ಸ್ವೀಕರಿಸಿ,ದೈವಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೈವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.