ಪೆರಾಜೆ ಜಾತ್ರೋತ್ಸವ : ಕರಿಭೂತ ನೇಮ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಸುಮಾರು ಒಂದು ತಿಂಗಳಿನಿಂದ ಜಾತ್ರೋತ್ಸವ ನಡೆಯುತ್ತಿದ್ದು, ಇಂದು ರಾತ್ರಿ ಕಾರಣಿಕ ದೈವ ಕರಿಭೂತದ ನೇಮ ನಡೆಯಿತು.

ಆಡಳಿತ ಮಂಡಳಿಯವರು, ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದು ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು.

ನಾಳೆ ಹರಕೆಯ ಕರಿಭೂತದ ನೇಮ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.