ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಮಕ್ಕಳ ಗ್ರಾಮಸಭೆ

0

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ ಬಾಳಿಲ ಗ್ರಾ.ಪಂ. ಆಶ್ರಯದಲ್ಲಿ ಡಿ. 30ರಂದು ನಡೆಯಿತು. “ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಿ. ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿರಿ” ಎಂದು ಸಂಪನ್ಮೂಲ ವ್ಯಕ್ತಿ, ತಾಲೂಕು ನೋಡಲ್ ಅಧಿಕಾರಿ ಶ್ರೀಮತಿ ಅಮೃತಾ ಹೇಳಿದರು. ಇವರು ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಬೆಳ್ಳಾರೆ ಆರಕ್ಷಕ ಠಾಣಾ ಸಬ್ ಇನ್ಸ್ಪೆಕ್ಟರ್ ಅಶೋಕ್ ಸಿ.ಎಂ ಉಪಸ್ಥಿತರಿದ್ದು, ರಸ್ತೆ ನಿಯಮ ಕ್ರೈಂ ಅಪರಾಧ, ಮೊಬೈಲ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಜ್ಯೋತಿ ಮಾತನಾಡಿ, ಮಕ್ಕಳಿಗೆ ಸ್ವಚ್ಛತೆ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿಸಿದರು.

ವಿದ್ಯಾರ್ಥಿಗಳು ರಸ್ತೆಯ ಅಸಮರ್ಪಕತೆ, ಬಸ್ಸಿನ ಅವ್ಯವಸ್ಥೆ, ಶಾಲೆಗೆ ಆವರಣದ ಅವಶ್ಯಕತೆ, ಆಶ್ರಮ ಶಾಲೆಯ ನೂತನ ಕಟ್ಟಡದ ಬಳಕೆ, ಬೀದಿ ನಾಯಿಗಳ ಕಾಟ ಮುಂತಾದ ಪ್ರಶ್ನೆಗಳನ್ನು ಕೇಳಿದರು. ರವೀಂದ್ರ ರೈ ಟಪ್ಪಾಲು ಕಟ್ಟೆ, ಹರ್ಷ ಭಟ್‌ ಜೋಗಿಬೆಟ್ಟು, ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಸೂಕ್ತ ಉತ್ತರವನ್ನು ನೀಡಿದರು.

ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಯಶೋಧರ ಎನ್ , ಶಾಲಾ ವಿದಾರ್ಥಿ ಸರಕಾರದ ನಾಯಕ ಚಿಂತನ್ ಎ ವೇದಿಕೆಯಲ್ಲಿ ಹಾಜರಿದ್ದು ಮೆಚ್ಚುಗೆಯ ನುಡಿಗಳನ್ನು ನುಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ ಹೂವಪ್ಪ ಗೌಡ ಸ್ವಾಗತಿಸಿ, ಶಿಕ್ಷಕ ವೆಂಕಟೇಶ್ ಕುಮಾರ್ ಯು ವಂದಿಸಿದರು. ಶಿಕ್ಷಕಿ ಸಹನಾ ಬಿ.ಬಿ ಕಾರ್ಯಕ್ರಮ ನಿರೂಪಿಸಿದರು. ಬಾಳಿಲ ಗ್ರಾಮ ಪಂ. ವ್ಯಾಪ್ತಿಯ ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬೀಟ್ ಪೊಲೀಸ್, ಶಿಕ್ಷಕ ವರ್ಗ, ಕಿರಿಯ ಪ್ರಾಥಮಿಕ ಶಾಲೆ ಇಂದ್ರಾಜೆ, ವಾಲ್ಮೀಕಿ ಆಶ್ರಮ ಶಾಲೆ ಬಾಳಿಲ, ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ವಿದ್ಯಾರ್ಥಿಗಳು ಹಾಜರಿದ್ದರು.