ದೊಡ್ಡೇರಿ ಶಾಲೆಯಲ್ಲಿ ನೀರಿನ ಅಭಾವ

0

ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಸಿದ‌ ಶಾಲಾ‌ ಶಿಕ್ಷಕ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ

ಅಜ್ಜಾವರ ಗ್ರಾಮದ ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೀರಿನ ಅಭಾವ ಎದುರಾದುದರಿಂದ ಶಾಲೆಯ ಮುಖ್ಯ ಶಿಕ್ಣಕ ಕೃಷ್ಣಾನಂದ ಸರಳಾಯ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ‌ದಯಾನಂದ ದೊಡ್ಡೇರಿ ಯವರು ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಸಿದ್ದಾರೆ.

ಶಾಲೆ ಶಿಥಿಲವಾಗಿದ್ದುದರಿಂದ ಅದರ‌ ದುರಸ್ತಿಗೆ ಸರಕಾರದಿಂದ ಅನುದಾನ ಮಂಜೂರು ಗೊಂಡಿದೆ. ಇದೀಗ‌ ಕೆಲಸ ಆಗುತಿದ್ದು, ಆ ಕೆಲಸಕ್ಕೆ ಹಾಗೂ ಗೋಡೆಗಳಿಗೆ ನೀರು ಹಾಕಬೇಕಾಗಿದೆ. ಇದಕ್ಕೆ ನೀರಿನ ಅಭಾವ ಎದುರಾಯಿತು. ಬಳಿಕ ಶಾಲೆಯ ಶಿಕ್ಷಕರಾಗಿರುವ ಕೃಷ್ಣಾನಂದ ಸರಳಾಯರು ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದ ಸೇರಿ ಕೊಳವೆಬಾವಿ ಕೊರೆಯಲು ನಿಶ್ಚಯಿಸಿ, ಡಿ.31 ರಂದು ಕೊಳವೆಬಾವಿ ಕೊರೆಸಿದ್ದಾರೆ. ನೀರು ಕೂಡಾ ದೊರೆತಿದೆ.

ಶಾಲೆಯಲ್ಲಿದ್ದ ಹಳೆ ಕೊಳವೆಬಾವಿ ಸರಿಪಡಿಸಲು ಸುಮಾರು 25 ಸಾವಿರ ಖರ್ಚು ಮಾಡಿದರೂ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಎಸ್.ಡಿ.ಎಂ.ಸಿ. ಅಧ್ಯಕ್ಷ ರು.

“ಶಾಲೆಯ ಕೆಲಸ ಆಗುತ್ತಿದೆ.‌ಇದಕ್ಕೆ ನೀರಿನ ಅಭಾವ ಎದುರಾಯಿತು. ಬಳಿಕ ಶಾಲೆಯ‌ ಮುಖ್ಯ ಶಿಕ್ಷಕರು ಕೊಳವೆಬಾವಿ ಸ್ವಂತ ಖರ್ಚಿನಲ್ಲಿ ಕೊರೆಸುವ ಯೋಚನೆ ಮಾಡಿದಾಗ ನಾನು ಕೈ ಜೋಡಿಸಿದೆ. ಈಗ‌ನೀರು ಸಿಕ್ಕಿದೆ”.
-ದಯಾನಂದ ಅಧ್ಯಕ್ಷರು ಎಸ್.ಡಿ.ಎಂ.ಸಿ.‌ ದೊಡ್ಡೇರಿ.