ಕುರುಂಜಿಭಾಗ್ : ಮನೆಯಲ್ಲಿ ಬೆಂಕಿ ಅವಘಡ

0

ಸುಳ್ಯದ ವೈದ್ಯರಾಗಿರುವ ಕುರುಂಜಿಭಾಗ್ ನಿವಾಸಿ ಡಾ| ಹಿಮಕರ್ ಕೆ.ಎಸ್. ರವರ ಮನೆಯ ಕೊಟ್ಟಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಮೇ.೧೯ರಂದು ವರದಿಯಾಗಿದೆ.

ಹಿಮಕರರ ಕುಟುಂಬ ಮನೆಯಲ್ಲಿ ಇರಲಿಲ್ಲ. ಇನ್‌ವರ್ಟರ್ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿ, ಸ್ಥಳೀಯರಿಗೆ ಹೊಗೆ ಕಂಡು ಬಂದುದರಿಂದ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿ ಅವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿರುವುದಾಗಿ ತಿಳಿದು ಬಂದಿದೆ.


ಇನ್‌ವರ್ಟರ್ ಬ್ಯಾಟರಿ, ವಾರ್ಷಿಂಗ್ ಮೆಷಿನ್ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿರುವುದಾಗಿ ತಿಳಿದು ಬಂದಿದೆ.