ಆನೆಗುಂಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ಚಾಲಕನಿಗೆ ಗಾಯ

0

ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ತಿರುವಿನಲ್ಲಿ ಪಲ್ಟಿಯಾಗಿ, ಚಾಲಕ ಸಣ್ಣಪುಟ್ಟ ಗಾಯಗೊಂಡ ಘಟನೆ ಕನಕಮಜಲು ಗ್ರಾಮದ ಆನೆಗುಂಡಿ ತಿರುವಿನಲ್ಲಿ ಮೇ.19ರಂದು ಅಪರಾಹ್ನ ಸಂಭವಿಸಿದೆ‌.

ಮೈಸೂರಿನಿಂದ ಮಂಗಳೂರಿಗೆ ಟೊಮ್ಯಾಟೊ ಹೊತ್ತೊಯ್ಯತ್ತಿದ್ದ ಲಾರಿ ಆನೆಗುಂಡಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದು ಸಮೀಪದ ಕಂದಕಕ್ಕೆ ಉರುಳಿ ಪಲ್ಟಿಯಾಗಿದ್ದು, ಪರಿಣಾಮವಾಗಿ ಚಾಲಕ ಸಣ್ಣಪುಟ್ಟ ಗಾಯಗೊಂಡಿದ್ದು,

ಅವರನ್ನು ಸ್ಥಳೀಯರು ಸೇರಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತೆಂದು ತಿಳಿದುಬಂದಿದೆ. ಲಾರಿಯನ್ನು ಕ್ರೈನ್ ಮೂಲಕ ಮೇಲೆತ್ತಲಾಗಿರುವುದಾಗಿ ತಿಳಿದುಬಂದಿದೆ.