ಅರಂಬೂರು ವಯನಾಟ್ ಕುಲವನ್ ದೈವಸ್ಥಾನಕ್ಕೆ ಸಂಚರಿಸುವ ರಸ್ತೆ ಕಾಂಕ್ರೀಟಿಕರಣ – ಶಾಸಕರಿಂದ ಉದ್ಘಾಟನೆ

0

ಆಲೆಟ್ಟಿ ಗ್ರಾಮದ ಅರಂಬೂರು ವಾರ್ಡಿನಲ್ಲಿರುವ ಶ್ರೀ ವಯನಾಟ್ ಕುಲವನ್ ದೈವಸ್ಥಾನಕ್ಕೆ ಸಂಚರಿಸುವ ರಸ್ತೆಯ ಕಾಂಕ್ರೀಟ್ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಇಂದು ಉದ್ಘಾಟಿಸಿ ವಾಹನ ಸಂಚಾರಕ್ಕೆಮುಕ್ತಗೊಳಿಸಿದರು.

ಈ ಭಾಗದ ನಾಗರಿಕರ ಬೇಡಿಕೆಗೆ ಸ್ಫಂದಿಸಿದ ಮಾಜಿ ಶಾಸಕ ಎಸ್.ಅಂಗಾರ ರವರು ಮುತುವರ್ಜಿ ತಮ್ಮ ಅವಧಿಯಲ್ಲಿ ಮುಖ್ಯ ಮಂತ್ರಿ ನಿಧಿಯಿಂದ ವಿಶೇಷ ಅನುದಾನ
ರೂ.30 ಲಕ್ಷ ಬಿಡುಗಡೆಗೊಳಿಸಿದ್ದರು.

ಅನುದಾನದಲ್ಲಿ ಸುಮಾರು 270 ಮೀಟರ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ‌ಮಾಡಲಾಗಿದೆ. ಭತ್ತ ಬೇಸಾಯದ ಗದ್ದೆಯ ಮಧ್ಯೆ ಹಾದು ಹೋಗುವ ರಸ್ತೆಯಾಗಿದ್ದು ಎರಡು ಬದಿಗೆ ತಡೆಗೋಡೆ ನಿರ್ಮಿಸಿ ಕಾಂಕ್ರೀಟಿಕರಣ ಮಾಡಲಾಗಿದೆ.


ವರ್ಗ ಜಮೀನಿನಲ್ಲಿ ರಸ್ತೆಯು ಇರುವುದರಿಂದ ಆಲೆಟ್ಟಿ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಜಯಲತಾ ಮತ್ತು ಸ್ಥಳೀಯರಾದ ಸೀತಾರಾಮ ಪ್ರಭು ರವರು ರಸ್ತೆ ನಿರ್ಮಾಣಕ್ಕೆ ಬೇಕಾದ ತಮ್ಮ ಸ್ವಂತ ಜಾಗವನ್ನು ನೀಡಿರುತ್ತಾರೆ. ಇದರಿಂದಾಗಿ ಈ ಭಾಗದಲ್ಲಿ ವಾಸಿಸುವ ಸಾಕಷ್ಟು ಮನೆಗಳಿಗೆ ಸಂಪರ್ಕದ ರಸ್ತೆಯಾಗಿ ಇದು ಬಹಳ ಪ್ರಯೋಜನಕಾರಿ ಯಾಗಿದೆ‌.


ಅರಂಬೂರು ಪ್ರದೇಶಕ್ಕೆ ಶಾಸಕಿಯಾದ ಬಳಿಕ ಪ್ರಥಮ ಬಾರಿಗೆ ಆಗಮಿಸಿದ ಶಾಸಕರನ್ನು ಹಾಗೂ ಅಭಿವೃದ್ಧಿ ಕಾಮಗಾರಿಗೆ ಅನುದಾನ ತರಿಸುವಲ್ಲಿ ಸಹಕರಿಸಿದ ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಯವರನ್ನು ಸನ್ಮಾನಿಸಲಾಯಿತು. ಪಂಚಾಯತ್ ಅಧ್ಯಕ್ಷೆ ವೀಣಾ ಆಲೆಟ್ಟಿ, ಸದಸ್ಯರಾದ ಸುಧೇಶ್ ಅರಂಬೂರು, ವೇದಾವತಿ ನೆಡ್ಚಿಲು, ಅನಿತಾ, ಮಾಜಿ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ರತೀಶನ್ ಪರವಾಗಿ ಕುಂಞಕಣ್ಣ ಬೆಳ್ಚಪ್ಪಾಡ ರವರನ್ನು ಹಾಗೂ ಸ್ಥಳ ದಾನಿಗಳನ್ನು ಗೌರವಿಸಿಅಭಿನಂದಿಸಲಾಯಿತು.

ಆಲೆಟ್ಟಿ ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನಿಲ್ ಕೇರ್ಪಳ, ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು,
ಸ್ಥಳೀಯರಾದ ಜಗದೀಶ್ ಸರಳಿಕುಂಜ, ಎನ್.ಎ.ಗಂಗಾಧರ, ಸುರೇಶ್ ಕುಲಾಲ್ ಮಜಿಗುಂಡಿ,ಅನಿಲ್ ಕೆ.ಸಿ ಪರಿವಾರಕಾನ, ಹರೀಶ್ ಪಡ್ಪು, ರಮೇಶ್ ನಾಯಕ್, ಶ್ರೀಮತಿ ಪ್ರಭು, ಶಿವರಾಮ ರೈ, ಮೋಹನ ನಾಯ್ಕ್ ಕೂಟೇಲು ಹಾಗೂ ಈ ಭಾಗದ ಫಲಾನುಭವಿಗಳು‌ ಉಪಸ್ಥಿತರಿದ್ದರು.

ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಕಾರ್ಯಕ್ರಮ ನಿರ್ವಹಿಸಿದರು.