ಪೆರಾಜೆ: ಕಾಡುಪ್ರಾಣಿಯೆಂದು ಸಾಕುನಾಯಿಗೆ ಗುಂಡಿಟ್ಟು ಕೊಂದ ಬೇಟೆಗಾರರು

0

ಕಾಡು ಪ್ರಾಣಿ ಎಂದು ತಿಳಿದು ಸಾಕು ನಾಯಿಯೊಂದಕ್ಕೆ ಕೋವಿಯಿಂದ ಗುಂಡು ಹಾರಿಸಿ ಕೊಂದ ಘಟನೆ ಪೆರಾಜೆಯಲ್ಲಿ ಡಿ‌.14ರಂದು ರಾತ್ರಿ ಸಂಭವಿಸಿದೆ.

ಪೆರಾಜೆಯ ಕಾಪುಮಲೆ ಕುಂದಲ್ಪಾಡಿ ದಯಾಕರ ಅವರ ಮನೆಯ ಬಳಿ ಬೇಟೆಗೆ ಬಂದ ವ್ಯಕ್ತಿಗಳು ಮನೆಯ ಸಾಕು ನಾಯಿಗೆ ರಾತ್ರಿ 11 30 ಕ್ಕೆ ಗುಂಡು ಹೊಡೆದು ಪರಾರಿಯಾಗಿದ್ದರು. ಸಾಕುನಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.