ಬೆಳ್ಳಾರೆ: ಕುಣಿತ ಭಜನಾ ತರಬೇತಿ ಪ್ರಾರಂಭೋತ್ಸವ

0

ಕುಣಿತ ಭಜನೆ ಮಕ್ಕಳ ಮನಸ್ಸನ್ನು ಅರಳಿಸುತ್ತದೆ : ಸುರೇಶ್ ಕುಮಾರ್ ಶೆಟ್ಟಿ

ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಆಶ್ರಯದಲ್ಲಿ ಬೆಳ್ಳಾರೆ ಸ್ನೇಹಾoಜಲಿ ಕುಣಿತ ಭಜನಾ ತಂಡದ 2ನೇ ಬ್ಯಾಚ್ ನ ತರಬೇತಿ ಡಿ. 15ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಂಗಣದಲ್ಲಿ ಪ್ರಾರಂಭಗೊಂಡಿತು. ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ದೀಪ ಪ್ರಜ್ವಲಿಸಿ ಮಾತನಾಡುತ್ತಾ ಕುಣಿತ ಭಜನೆ ಮಕ್ಕಳ ಮನಸ್ಸನ್ನು ಅರಳಿಸುತ್ತದೆ. ವಿದ್ಯಾಭ್ಯಾಸದ ಜೊತೆಗೆ ಧಾರ್ಮಿಕತೆಯನ್ನು ಮತ್ತು ಒಗ್ಗೂಡುವಿಕೆಯನ್ನು ಕಲಿಸುತ್ತದೆ ಎಂದು ಹೇಳಿ ಶುಭಹಾರೈಸಿದರು. ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾದ ಪದ್ಮನಾಭ ಬೀಡು ಅಧ್ಯಕ್ಷತೆ ವಹಿಸಿದ್ದರು.

ಕುಣಿತ ಭಜನಾ ತರಬೇತುದಾರರಾದ ಸದಾನಂದ ಆಚಾರ್ಯ ಕಾಣಿಯೂರು, ಸ್ನೇಹಿತರ ಕಲಾ ಸಂಘದ ಕಾರ್ಯದರ್ಶಿ ಗಣೇಶ್ ಪಾಟಾಳಿ ಕುರುoಬುಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ಶ್ರೀನಿವಾಸ ಕುರುಂಬುಡೇಲು ಸ್ವಾಗತಿಸಿ, ಉಪಾಧ್ಯಕ್ಷ ವಸಂತ ಗೌಡ ಪಡ್ಪು ವಂದಿಸಿದರು. ಸಂಜಯ್ ನೆಟ್ಟಾರು ಕಾರ್ಯಕ್ರಮ ನಿರೂಪಿಸಿದರು.