ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ದಿನ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ಕೆವಿಜಿ ಆಟದ ಮೈದಾನದಲ್ಲಿ ಜ.9ರಂದು ಜರುಗಲಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ರಣಜಿ ತಂಡದ ಮುಖ್ಯ ಆಯ್ಕೆದಾರರು, ಗೋವಾ ಕ್ರಿಕೆಟ್ ತಂಡದ ಕೋಚ್ ಆಗಿರುವ ಶ್ರೀ . ದೊಡ್ಡ ಗಣೇಶ ರವರು ಆಗಮಿಸಲಿದ್ದಾರೆ.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕ್ರೀಡಾ ನೃತ್ಯ, ಪಥಸಂಚಲನ, ಯೋಗ, ಕರಾಟೆ ಮತ್ತು ವಿವಿಧ ಕ್ರೀಡಾ ಡ್ರಿಲ್ ಗಳ ಮೂಲಕ ಮನೋರಂಜನೆಯನ್ನು ನೀಡಲಿದ್ದಾರೆ. ಜೊತೆಗೆ ಪೋಷಕರಿಗೂ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.