ಯೋಗಾಸನದಲ್ಲಿ ಪಂಜದ ಅನ್ವಿತಾ ಶೆಟ್ಟಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ಪತಂಜಲಿ ಯೋಗ ಕೇಂದ್ರ ಬೆಂಗಳೂರು,ಡಿ.ವಿ.ಜಿ ಶೈಕ್ಷಣಿಕ ಮತ್ತು ಸಾಂಸ್ಕೃತಿ ವೇದಿಕೆ ಬೆಂಗಳೂರು ಇವರು ಶ್ರೀ ಹೊನ್ನಗಂಗಾ ಕಲ್ಯಾಣ ಭವನ ಲಗ್ಗೆರೆ, ಬೆಂಗಳೂರಿನಲ್ಲಿ ಆಯೋಜಿಸಿದ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ -2024 ರಲ್ಲಿ8 ರಿಂದ 12 ವರ್ಷದ ಬಾಲಕಿಯರ ವಿಭಾಗದಲ್ಲಿ ಪಂಜದ ಅನ್ವಿತಾ ಶೆಟ್ಟಿ ಪಂಚಮ ಸ್ಥಾನಗಳಿಸಿ
ಮಲೇಷ್ಯಾದಲ್ಲಿ ಏಪ್ರಿಲ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ನಿರಂತರ ಯೋಗ ಕೇಂದ್ರ ಪಂಜದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ
4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಪಂಜದ ಪಲ್ಲೋಡಿ ಜಗನ್ನಾಥ ಶೆಟ್ಟಿ ಮತ್ತು ಶ್ರೀಮತಿ ಜಯಲಕ್ಷ್ಮಿ. ಜೆ. ಶೆಟ್ಟಿ ರವರ ಪುತ್ರಿ.