ಯೋಗಾಸನದಲ್ಲಿ ನಾವೂರಿನ ತನುಷ್ ಕೆ. ಆರ್. ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ಪತಂಜಲಿ ಯೋಗ ಕೇಂದ್ರ ಲಗ್ಗೆರೆ ಬೆಂಗಳೂರು ಇವರು ನಡೆಸಿದ ಮುಕ್ತ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 12 ರಿಂದ 15 ವರ್ಷದ ಬಾಲಕರ ವಿಭಾಗದಲ್ಲಿ ತನುಷ್ ಕೆ. ಆರ್ ಪ್ರಥಮ ಸ್ಥಾನಿಯಾಗಿಅಂತರಾಷ್ಟ್ರೀಯಮಟ್ಟಕ್ಕೆಆಯ್ಕೆಯಾಗಿರುತ್ತಾನೆ. ಮಲೇಷ್ಯಾದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾನೆ. ಈತ ನಾವೂರಿನ ರವಿ ಆಚಾರ್ಯ ಮತ್ತು ಪ್ರಜ್ಞಾ ದಂಪತಿಯ ಪುತ್ರ.


ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ. ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವಿದ್ಯಾರ್ಥಿ, ಸಂತೋಷ್ ಮುಂಡಕಜೆಯವರ ಶಿಷ್ಯನಾಗಿರುತ್ತಾನೆ.