ಬಳ್ಪ ಗ್ರಾಮೋತ್ಸವ ಸಂಜೀವಿನಿ ಉತ್ಪನ್ನಗಳ ಮಾರಾಟ

0

ಬಳ್ಪ ಗ್ರಾಮೋತ್ಸವದಲ್ಲಿ ಸಂಜೀವಿನಿ ಸ್ವ ಸಹಾಯ ಗುಂಪಿನ ಸದಸ್ಯರು ಮಾಡಿದಂತಹ ಉತ್ಪನ್ನಗಳ ಮಾರಾಟ ಮತ್ತು ವಸ್ತು ಪ್ರದರ್ಶನ ನಡೆಯಿತು. ಕಡಬ ತಾಲೂಕು ಬಿ.ಆರ್.ಪಿ.ಇ.ಪಿ ವನಸುಂದರಿ, ಕಡಬ ತಾಲೂಕಿನ ವಲಯ ಮೇಲ್ವಿಚಾರಕಿ ಸುವಿನ, ಒಕ್ಕೂಟದ ಅದ್ಯಕ್ಷೆ ಸುಜಾತ ಗಣೇಶ್ ಮತ್ತು ಬಳ್ಪ ಎಂ.ಬಿ.ಕೆ, ಎಲ್.ಸಿ.ಆರ್.ಪಿ, ಸಂಜೀವಿನಿ ಗ್ರಾಮ ಒಕ್ಕೂಟದ ಅದ್ಯಕ್ಷೆ ಮೋಹಿನಿ ಮತ್ತು ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು. ಗ್ರಾಮವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ಸಂಜೀವಿನಿ ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.