ಪಂಜದ ನೆಕ್ಕಿಲ ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ನೇಮೋತ್ಸವವು.ಜ.15 ರಂದು ಮುಂಜಾನೆಯಿಂದ ಆರಂಭ ಗೊಂಡಿದ್ದು ರಾತ್ರಿ ತನಕ ನಡೆಯಲಿದೆ.
ಜ.15 ರಂದು ಬೆಳಿಗ್ಗೆ ಶ್ರೀ ವಾಸುಕಿ ನಾಗರಾಜ ದೇವರ ಸಾನಿಧ್ಯದಲ್ಲಿ ಸ್ವಸ್ತಿ ಪುಣ್ಯಾ ಹವಾಚನ, ನವಕ ಕಲಶ, ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ ನಡೆಯಿತು.
ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ಸ್ವಸ್ತಿ ಪುಣ್ಯಾ ಹವಾಚನ ವಾಚನ, ಗಣಪತಿ ಹೋಮ, ನವಕ ಕಲಶ, ಕಲಶಾಭಿಷೇಕ , ತಂಬಿಲಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 4ಕ್ಕೆ ದೈವಗಳಿಗೆ ತಂಬಿಲ ಹಾಗೂ ಭಂಡಾರ ತೆಗೆಯುವುದು. ರಾತ್ರಿ ಗಂಟೆ 7ರಿಂದ ಶ್ರೀ ರಕ್ತೇಶ್ವರಿ ದೈವದ ನೇಮ -ಬಟ್ಟಲು ಕಾಣಿಕೆ , ರಾತ್ರಿ ಗಂಟೆ 9 ರಿಂದ ವರ್ಣರಪಂಜುರ್ಲಿ ಹಾಗೂ ಗುಳಿಗ ದೈವದ ನೇಮೋತ್ಸವ, ರಾತ್ರಿ ಗಂಟೆ 9.30 ರಿಂದ ಅನ್ನಸಂತರ್ಪಣೆ ನಡೆಯಲಿದೆ.