ಕೊಡಗು ಗೌಡ ಸಮಾಜ ಬೆಂಗಳೂರು ಇಲ್ಲಿ ಬೆಂಗಳೂರಿನ ಎಲ್ಲಾ ಗೌಡ ಸಮಾಜ ಮತ್ತು ಒಕ್ಕಲಿಗ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯು ಜ.14 ರಂದುನಡೆಯಿತು. ಕೊಡಗಿನಲ್ಲಿ ನಡೆಯುತ್ತಿರುವ ಕೊಡವ ಲ್ಯಾಂಡ್ ಬೇಡಿಕೆ ಮತ್ತು ಡಾ।ಸುಬ್ರಮಣ್ಯಂ ಸ್ವಾಮಿ ರವರು ಕೊಡವರ ಪರವಾಗಿ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಕೊಡವ ಸಾಯುತ್ತ ಪರಿಷತ್ ಮತ್ತು ಕೊಡವರನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸಬೇಕೆಂದು ಮೊಕದ್ದಮೆ ಹೂಡಿರುವುದರ ಬಗ್ಗೆ ಸಮಗ್ರವಾದ ಚರ್ಚೆಯನ್ನು ನಡೆಸಿದ್ದು ಸದರಿ ಸಭೆಯಲ್ಲಿ ಕೊಡಗಿನಲ್ಲಿ ಶೇಕಡ 80 ರಿಂದ 90 ರಷ್ಟು ಜನಸಂಖ್ಯೆಯು ಗೌಡರು. ಒಕ್ಕಲಿಗರು, ಹಿಂದುಳಿದ ವರ್ಗದವರು ಮತ್ತು ಇತರೆ ಜನಾಂಗದವರು ವಾಸಿಸುತ್ತಿರುವುದರಿಂದ ಕೇವಲ ಅಲ್ಪಸಂಖ್ಯಾತ ವರ್ಗಕ್ಕೆ ಪ್ರತ್ಯೇಕ ರಾಜ್ಯ ಅಥವಾ ಸ್ವಾಯತ್ತತೆ ನೀಡುವುದು ಎಷ್ಟು ಸಮಂಜಸ ? ಎಂದು ಚರ್ಚಿಸಲಾಯಿತು.
ಸರಕಾರ ಇಂತಹ ಬೇಡಿಕೆಗಳಿಗೆ ಮಣಿದರೆ, ಮಣಿಪುರದಂತಹ ಜನಾಂಗೀಯ ಸಂಘರ್ಷಕ್ಕೆ ಒಳಗಾಗುವ ಪರಿಸ್ಥಿತಿ ಉದ್ಭವವಾಗಬಹುದು. ಹಾಗಾಗಿ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ನಾವೆಲ್ಲರೂ ರಾಷ್ಟ್ರದ ಐಕ್ಯತೆಗಾಗಿ, ಸಂವಿಧಾನದ ಮೂಲಭೂತ ತತ್ವಗಳಿಗೆ ಧಕ್ಕೆಯಾಗದ ರೀತಿಯಲ್ಲಿ ನಮ್ಮೆಲ್ಲರ ಅಸ್ತಿತ್ವದ ಉಳಿವಿಗಾಗಿ ರಾಜಕೀಯವಾಗಿ, ಸಾಮಾಜಿಕವಾಗಿ ಕಾನೂನಾತ್ಮಕವಾಗಿ ಹೋರಾಡಬೇಕಾಗಿದೆ ಎಂದು ನಿರ್ಧರಿಸಲಾಯಿತು.
ಈ ಸಭೆಯಲ್ಲಿ
ಕೆ.ಎನ್. ಲಿಂಗೇಗೌಡ, ಅಧ್ಯಕ್ಷರು ಕರ್ನಾಟಕ ರಾಜ್ಯ ಒಕ್ಕಲಿಗರ ಜನಜಾಗೃತಿ ವೇದಿಕೆ. ಬೆಂಗಳೂರು, ಗೋವಿಂದೇಗೌಡ, ಅಧ್ಯಕ್ಷರು, ಒಕ್ಕಲಿಗರ ಸಂಘ ಹಾಗೂ ಕಾರ್ಮಿಕ ಹೋರಾಟ ಸಮಿತಿ ಕೆಂಪಾಪುರ, ಬೆಂಗಳೂರು, ಕುಮಾರ್, ಅಧ್ಯಕ್ಷರು, ಒಕ್ಕಲಿಗರ ಕ್ರಿಯಾ ಸಮಿತಿ ಬೆಂಗಳೂರು, ದೇವರಾಜ್, ಅಧ್ಯಕ್ಷರು, ರಾಜ್ಯ ಒಕ್ಕಲಿಗರ ಮಹಾಸಭಾ ಬೆಂಗಳೂರು,
ಬೆಟ್ಟಸ್ವಾಮಿ ಅಧ್ಯಕ್ಷರು, ಒಕ್ಕಲಿಗರ ಸಂಘ, ಉಳ್ಳಾಲ,
ಕೆ.ಟಿ. ಚಂದ್ರು, ಅಧ್ಯಕ್ಷರು, ಒಕ್ಕಲಿಗರ ಡೈರೆಕ್ಟ್, ಬೆಂಗಳೂರು, ಗುರುಶಾಂತ್, ಅಧ್ಯಕ್ಷರು
ಆದಿವಾಸಿ ಜನಾಂಗ ಹಿತ ರಕ್ಷಣಾ ಸಮಿತಿ ಕೊಡಗು, ನಾನಯ್ಯ ಕೆಕಡಾ. ಅಧ್ಯಕ್ಷರು. ಕೊಡಗು ಗೌಡ ಸಮಾಜ, ಬೆಂಗಳೂರು, ಪಾಣತ್ತಲೆ ಪಳಂಗಪ್ಪ ಅಧ್ಯಕ್ಷರು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಬೆಂಗಳೂರು, ಕತ್ರಿಕೊಲ್ಲಿ ದೇವಯ್ಯ ಅಧ್ಯಕ್ಷರು, ಕೊಡಗು ಗೌಡ ಸಮಾಜ, ದಾಸರಹಳ್ಳಿ,ಅಜಿತ್ ಕುಮಾರ್ ಕುನ್ಯಾಳಿ, ಅಧ್ಯಕ್ಷರು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಯಲಹಂಕ, ತೇನನ ರಾಜೇಶ್, ನಿರ್ದೇಶಕರು, ಕೊಡಗು ಗೌಡ ಸಮಾಜದ ಒಕ್ಕೂಟ, ಮಡಿಕೇರಿ,ಕುದುಪಜ ಮೋಹನ್, ನಿರ್ದೇಶಕರು ಕೊಡಗು ಗೌಡ ಸಮಾಜದ ಒಕ್ಕೂಟ ಮಡಿಕೇರಿ,
ಶ್ರೀಮತಿ ತಳೂರು ಮಮತಾ, ಅಧ್ಯಕ್ಷರು, ಕೊಡಗು ಗೌಡ ಸಮಾಜ ಯುವ ವೇದಿಕೆ ಬೆಂಗಳೂರು, ದಯಾನಂದ ಕುಂಬ್ಲಾಡಿ, ಅಧ್ಯಕ್ಷರು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಯುವ ವೇದಿಕೆ, ಬೆಂಗಳೂರು,
ಹಿರಿಯ ವಕೀಲರು ನಿದ್ದೆಮಲೆ ಪ್ರಕಾಶ್, ಮತ್ತು ಎಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.