ಪೆರುವಾಜೆ : ಜಲದುರ್ಗಾದೇವಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಹಿನ್ನೆಲೆ

0

ಮಧ್ಯಾಹ್ನ ನಂತರ ರಥ ಬೀದಿಗೆ ವಾಹನ ಸಂಚಾರ ನಿಷೇಧ

ವಾಹನ ಪಾರ್ಕಿಂಗ್ : ಪ್ರತ್ಯೇಕ ಸ್ಥಳ ನಿಗದಿ

ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಜ.19 ರಂದು ಬ್ರಹ್ಮರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು ಭಕ್ತರು ಸಹಕರಿಸುವಂತೆ ಈ ಮೂಲಕ ವಿನಂತಿಸಲಾಗಿದೆ.

ಮಧ್ಯಾಹ್ನ ಭೋಜನ ಪ್ರಸಾದದ ನಂತರ ಬ್ರಹ್ಮರಥೋತ್ಸವ ಮುಗಿಯುವ ತನಕ ದೇವಾಲಯದ ಎದುರಿನ ರಥ ಬೀದಿಗೆ ವಾಹನ ಸಂಚಾರ ನಿಷೇಧಿಸಲಾಗಿದೆ.

ಸುಳ್ಯ, ಬೆಳ್ಳಾರೆ, ಪೆರುವಾಜೆ ಮಾರ್ಗವಾಗಿ ಬರುವ ಭಕ್ತರಿಗೆ ಜೆ.ಡಿ.ಸಭಾಭವನದ ವಠಾರ, ಪೆರುವಾಜೆ ಸ.ಹಿ.ಪ್ರಾ.ಶಾಲಾ ವಠಾರ, ಪೆರುವಾಜೆ ಗ್ರಾ.ಪಂ.ವಠಾರದಲ್ಲಿ ವಾಹನ ನಿಲುಗಡೆಗೆ ಅವಕಾಶ.


ಪುತ್ತೂರು, ಸವಣೂರು ಮಾರ್ಗವಾಗಿ ಬರುವ ಭಕ್ತರಿಗೆ ಪೆರುವಾಜೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.
ಪೆರುವಾಜೆ ದೇವಾಲಯದಿಂದ ಒಂದು ಕಿ.ಮೀ.ವ್ಯಾಪ್ತಿಯೊಳಗೆ ಇರುವ ಭಕ್ತರು ನಡೆದುಕೊಂಡೇ ಶ್ರೀ ಕ್ಷೇತ್ರಕ್ಕೆ ಬರುವ ಮೂಲಕ ವಾಹನ ದಟ್ಟಣೆ ನಿಯಂತ್ರಣಕ್ಕೆ ಸಹಕರಿಸುವುದು.


ಪೆರುವಾಜೆ ಪರಿಸರದ ಮುಖ್ಯ ರಸ್ತೆ ಬದಿಗಳಲ್ಲಿನ ಮನೆಗಳ ವಠಾರದಲ್ಲಿ ಸ್ಥಳವಕಾಶ ಇದ್ದರೆ ಬ್ರಹ್ಮರಥೋತ್ಸವಕ್ಕೆ ಬರುವ ಭಕ್ತರಿಗೆ ವಾಹನ‌ ನಿಲುಗಡೆಗೆ ಅವಕಾಶ ನೀಡುವ ಮೂಲಕ ಸಹಕರಿಸಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ವಿನಂತಿಸಿದ್ದಾರೆ.