ಹಾಲೆಮಜಲು ತರವಾಡು ಮನೆಯ ಧರ್ಮದೈವದ ನಡಾವಳಿ

0


ನಾಲ್ಕೂರು ಗ್ರಾಮದಲ್ಲಿರುವ ಹಾಲೆಮಜಲು ಕುಟುಂಬಸ್ಥರ ತರವಾಡು ಮನೆಯಲ್ಲಿ ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ನಡೆಯುತ್ತಿದೆ. ನಿನ್ನೆ ರಾತ್ರಿ ದೈವಗಳ ಭಂಡಾರ ಹಿಡಿದು ನಂತರ ಪಾಷಣಮೂರ್ತಿ, ಪಿಲಿಚಾಮುಂಡಿ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಭೂಮಿ ಪಂಜುರ್ಲಿ, ದೈವಗಳ ನೇಮ ನಡೆದು ಇಂದು ಬೆಳಿಗ್ಗೆಯಿಂದ ಧರ್ಮ ದೈವ ರುದ್ರ ಚಾಮುಂಡಿ ದೈವದ ನೇಮ ನಡೆಯುತ್ತಿದೆ.


ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರಾದ ಶೇಷಪ್ಪ ಗೌಡ ಹಾಲೆಮಜಲು ಹಾಗು ತರವಾಡು ಮನೆಯ ಯಜಮಾನ ಪುರುಷೋತ್ತಮ ಗೌಡ ಹಾಲೆಮಜಲು ಸೇರಿದಂತೆ ಕುಟುಂಬಸ್ಥರು , ಬಂಧುಮಿತ್ರರು ಕಾರ್ಯಕ್ರಮದಲ್ಲಿ ಇದ್ದರು. (ಚಿತ್ರ ವರದಿ :ಡಿ.ಹೆಚ್.)