ಬೆಳ್ಳಾರೆ ಮಖಾಂ ಉರೂಸ್ ಕಾರ್ಯಕ್ರಮ ಚಾಲನೆ

0

ಹಝ್ರತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್ ಕಾರ್ಯಕ್ರಮಕ್ಕೆ ಧ್ವಜಾರೋಹಣ ಮಾಡುವ ಮೂಲಕ ಅಸ್ಸಯ್ಯದ್ ಝೈನುಲ್ ಅಬಿದಿನ್ ಜಿಫ್ರಿ ತಂಙಳ್ ಚಾಲನೆ ನೀಡಿದರು.
ಝಕರಿಯ ಜುಮ್ಮಾ ಮಸೀದಿ ಖತೀಬರಾದ ಮಹಮ್ಮದ್ ನವವಿ ಮುಂಡೋಳೆ ದುವಾಶಿರ್ವಚನ ಮಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝಕರಿಯ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಯು ಹೆಚ್ ಅಬೂಭಕ್ಕರ್ ಹಾಜಿ ಮಂಗಳ ವಹಿಸಿದರು.
ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್‌ ಖಾದರ್ ಹಾಜಿ ಬಾಯಂಬಾಡಿ ಏಳು ದಿನಗಳ ಕಾಲ ನಡೆಯುವ ಊರೂಸ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಝಕರಿಯ ಜುಮ್ಮಾ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ರಹಿಮಾನ್‌ ಕಲ್ಲಪಣೆ,ಕೋಶಾಧಿಕಾರಿ ನಾಶೀರ್ ಯು.ಪಿ,ಅತ್ತಿಕರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ,ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಬಶೀರ್ ಯು.ಪಿ,ಉರೂಸ್ ಸಮಿತಿ ಕೋಶಾಧಿಕಾರಿ ಝಕರಿಯ ನಿಡ್ಮಾರ್,ಉರೂಸ್ ಸಮಿತಿ ಉಪಾಧ್ಯಕ್ಷ ಜಮಾಲ್.ಎಸ್,ಝಕರಿಯ ಜುಮ್ಮಾ ಮಸೀದಿ ಆಡಳಿತ ಸಮಿತಿ ನಿರ್ದೇಶಕರಾದ ಬಶೀರ್. ಕೆ.ಎ, ಇಸ್ಮಾಯಿಲ್ ಬಿ,ಹಸೈನಾರ್. ಬಿ,ಹನೀಫ್ ನೆಟ್ಟಾರು,ಹಮೀದ್ ಹೆಚ್ ಎಂ,ಹಮೀದ್ ಅಲ್ಪಾ, ಉಸ್ಮಾನ್ ಹಾಜಿ,ಅಜರುದ್ದೀನ್ ಬೆಳ್ಳಾರೆ,ಬೆಳ್ಳಾರೆ ಹಿರಿಯ ಉದ್ಯಮಿ ಹಾಜಿ ಮಮ್ಮಾಲಿ ಹಾಜಿ,ಹಸೈನಾರ್ ಮುಸ್ಲಿಯಾರ್, ಸುಲೈಮಾನ್ ಮುಸ್ಲಿಯಾರ್, ಝೈನುದ್ದೀನ್ ಮುಸ್ಲಿಯಾರ್, ಯೂಸುಫ್ ಮುಸ್ಲಿಯಾರ್, ರಫೀಕ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ರಾತ್ರಿ ನಡೆದ ಉರೂಸ್ ಸಮಾರಂಭದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಆಲೀ ತಂಙಳ್ ಕುಂಬೋಳ್ ನೆರವೇರಿಸಿದರು.


ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಪ್ರಭಾಷಣ ಮಾಡಿದರು.
ಜ.22 ರಂದು ಸಯ್ಯದ್ ಅಹ್ಮದ್ ಪುಕೋಯ ತಂಙಳ್ ಪುತ್ತೂರು ದುವಾಶಿರ್ವಚನ ಮಾಡಲಿದ್ದಾರೆ.
ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಜ.23 ರಂದು ಸಯ್ಯದ್ ಅಶ್ರಫ್ ತಂಙಳ್ ಅದೂರ್ ದುವಾಶಿರ್ವಚನ ಮಾಡಲಿದ್ದಾರೆ.
ನೌಪಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಜ.24 ರಂದು ನೂರೇ ಅಜ್ಮೀರ್
ವಲಿಯುದ್ದೀನ್ ಪೈಝಿ ವಾಯಕ್ಕಾಡ್ ರವರ ನೇತ್ರತ್ವದಲ್ಲಿ ನಡೆಯುವ ಅಧ್ಯಾತ್ಮಿಕ ಮಜ್ಲೀಸ ನೂರೇ ಅಜ್ಮೀರ್ ಜ.24 ರಂದು ನಡೆಯಲಿದೆ.
ಜ.25 ರಂದು ಮಜ್ಲೀಸ್ ನೂರ್
. ಶೈಖುನಾ ಅಬ್ದುಲ್‌ ಖಾದರ್ ಅಲ್ ಖಾಸಿಮಿ ಬಂಬ್ರಾಣ ಮಜ್ಲೀಸ್ ನೂರ್ ನೇತ್ರತ್ವ ವಹಿಸಲಿದ್ದಾರೆ.
ನಂತರ ನಡೆಯಲಿರುವ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ಸಯ್ಯದ್ ಮುಖ್ತಾರ್ ತಂಙಳ್ ಕುಂಬೋಳ್ ದುವಾಶಿರ್ವಚನ ಮಾಡಲಿದ್ದಾರೆ. ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಜ.26 ಖತಮುಲ್ ಖುರಾನ್
ಜ.26 ಶುಕ್ರವಾರ ಜುಮ್ಮಾ ನಮಾಝ್ ಬಳಿಕ ನಡೆಯಲಿರುವ ಖತಮುಲ್ ಖುರಾನ್ ಕಾರ್ಯಕ್ರಮದ ನೇತ್ರತ್ವವನ್ನು ಶೈಖುನಾ ಉಸ್ಮಾನ್ ಪೈಝಿ ತೋಡಾರ್ ವಹಿಸಲಿದ್ದಾರೆ.
ರಾತ್ರಿ ನಡೆಯಿರುವ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆ ಖಾಝಿ ಶೈಖುನಾ ತ್ವಾಖ ಅಹಮದ್ ಮುಸ್ಲಿಯಾರ್ ದುವಾಶಿರ್ವಚನ ಮಾಡಲಿದ್ದಾರೆ.
ಅಬ್ದುಲ್‌ ರಝಾಕ್ ಅಬ್ರಾರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಜ27ಸಮಾರೋಪ ಸಮಾರಂಭ ಹಾಗೂ ರಾಜ್ಯ ಮಟ್ಟದ ಸ್ಪರ್ದೆ
ಉರೂಸ್ ಸಮಾರಂಭ ಮತ ಪ್ರಭಾಷಣ ಕಾರ್ಯಕ್ರಮದ ಕೊನೆಯ ದಿನದ ಹಾಗೂ ಸಮಾರೋಪ ಸಮಾರಂಭದ ಮತ್ತು ರಾಜ್ಯ ಮಟ್ಟದ ಧಪ್ ಸ್ಪರ್ದೆ ಜ.27 ರಂದು ನಡೆಯಲಿದೆ.


ಸಮಾರೋಪ ಸಮಾರಂಭದಲ್ಲಿ ಸಮಸ್ತ ಕೇಂದ್ರ ಜಂಯ್ಯತ್ತುಲ್ ಉಲಮಾ ಅಧ್ಯಕ್ಷ ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಉರೂಸ್ ಸಮಾರೋಪ ಸಮಾರಂಭ ಉದ್ಘಾಟಿಸಲಿದ್ದಾರೆ.
ದ.ಕ. ಜಿಲ್ಲಾ ಸಮಸ್ತ ಜಂಯ್ಯತ್ತುಲ್ ಉಲಮಾ ಅಧ್ಯಕ್ಷ ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ದುವಾಶಿರ್ವಚನ ಮಾಡಲಿದ್ದಾರೆ.
ನೂರುಲ್ ಹುದಾ ಮಾಡನ್ನೂರು ಇದರ ಪ್ರಾಂಶುಪಾಲರಾದ ಅಡ್ವಕೇಟ್ ಹನೀಫ್ ಹುದವಿ,ಕೇಂದ್ರ ಮುಶಾವರ ಸದಸ್ಯ ಕೊಡಗು ಜಿಲ್ಲಾ ನಾಯಿಬ್ ಖಾಝಿ ಶೈಖುನಾ ಎಂ.ಎ ಅಬ್ದುಲ್ಲಾ ಉಸ್ತಾದ್, ಉಪಸ್ಥಿತರಿರುವರು.


ಆಶಿಕ್ ದಾರಿಮಿ ಅಲಪ್ಪುಝ ರವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್,ವಕ್ಪ್ ಸಚಿವರಾದ ಜಮೀರ್ ಖಾನ್,ಹಜ್ ಮತ್ತು ಪೌರಡಳಿತ ಸಚಿವ ರಹೀಂ ಖಾನ್,ವಕ್ಪ್ ಬೊರ್ಡ್ ಅಧ್ಯಕ್ಷ ಅನ್ವರ್ ಪಾಷ ಸೇರಿದಂತೆ ಅನೇಕ ಗಣ್ಯರು ಬಾಗವಹಿಸಲಿದ್ದಾರೆ.