ಸ್ನೇಹದಲ್ಲಿ ರಾಮೋತ್ಸವ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ನೂತನ ಬಾಲ ರಾಮನ ಮೂರ್ತಿಯ ಫೋಟೋವನ್ನು ರಾಮಾಯಣದ ಕೃತಿಗಳೊಂದಿಗೆ ಪಲ್ಲಕಿಯಲ್ಲಿರಿಸಿ ಶಾಲೆಯಿಂದ ಸೂರ್ಯಾಲಯಕ್ಕೆ ಮೆರವಣಿಗೆಯಲ್ಲಿ ವಾದ್ಯಘೋಷದೊಂದಿಗೆ ವಿದ್ಯಾರ್ಥಿಗಳು ಹೊತ್ತೊಯ್ದರು. ಸೂರ್ಯಾಲಯದಲ್ಲಿ ವಿದ್ಯಾರ್ಥಿಗಳು ರಾಮರಕ್ಷೆ, ರಾಮ ಭಜನೆ, ರಾಮತಾರಕ ಮಂತ್ರವನ್ನು ವಿದ್ಯಾರ್ಥಿಗಳೂ ಶಿಕ್ಷಕರೂ ಸೇರಿ ಹಾಡಿದರು.


ಪಲ್ಲಕಿಯ ಸುತ್ತಲೂ ವಿದ್ಯಾರ್ಥಿಗಳೂ ನೃತ್ಯ ಭಜನೆ ಮಾಡಿದ ಬಳಿಕ ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಲೈವ್ ಚಿತ್ರೀಕರಣವನ್ನು ಡಿಜಿಟಲ್ ಬೋರ್ಡ್ ಮೂಲಕ ತೋರಿಸಲಾಯಿತು. ಬಳಿಕ ರಾಮಾಯಣದ ಪ್ರವಚನ ನೀಡಿದ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು “ಸೂರ್ಯ ವಂಶಿಯನಾದ ರಾಮನನ್ನು ಸೂರ್ಯಾಲಯದಲ್ಲೇ ಗೌರವಿಸಿದ್ದು ಸಂತೋಷವಾಗಿದೆ” ಎಂಬುದಾಗಿ ಹೇಳಿದರು.