ಮರ್ಕಂಜ : ದೈವಗಳಿಗೆ ನೇಮೋತ್ಸವದೊಂದಿಗೆ ನೆಲ್ಲಿಂಬಾಡಿ ಜಾತ್ರೆಗೆ ತೆರೆ

0

ನೆಲ್ಲೂರು ಕೆಮ್ರಾಜೆ ಮತ್ತು‌ ಮರ್ಕಂಜ ಗ್ರಾಮಗಳ ಪಂಚಸ್ಥಾಪನೆಗೆ ಸಂಬಂಧಿಸಿದ ಇತಿಹಾಸ ಪ್ರಸಿದ್ಧ ನೆಲ್ಲಿಂಬಾಡಿ ಜಾತ್ರೆ ದೈವಗಳ‌ ನೇಮೋತ್ಸವದೊಂದಿಗೆ ಮುಕ್ತಾಯಗೊಂಡಿತು. ‌ನೆಲ್ಲಿಂಬಾಡಿ ಜಾತ್ರೆ ಈ ಉಭಯ ಗ್ರಾಮಗಳಲ್ಲಿ‌ ಮೊದಲ ಜಾತ್ರೆ ಎಂಬ ಪ್ರತೀತಿಯನ್ನು ಪಡೆದಿದೆ.

ಅನಾದಿ ಕಾಲದಿಂದಲೂ ‌ಮುಂಡೋಡಿ ಮಾಳಿಗೆಯಿಂದ ಭಂಡಾರ ಬಂದು ನೆಲ್ಲಿಂಬಾಡಿಯಲ್ಲಿ ಜಾತ್ರೆ ನಡೆಯುವುದು ವಾಡಿಕೆ.‌ ಅದರಂತೆ‌ ಈ ಬಾರಿಯೂ ನಡೆದಿದೆ. ಆದರೆ ಮುಂಡೋಡಿ‌ ಮಾಳಿಗೆ ಕಳೆದ ತಿಂಗಳಷ್ಟೆ ಜೀರ್ಣೋದ್ಧಾರ ಗೊಂಡು‌ಪುನರ್ ಪ್ರತಿಷ್ಠಾ ಪನೆಗೊಂಡ ಬಳಿಕ ನೂತನ ಭಂಡಾರಗಳು ನೆಲ್ಲಿಂಬಾಡಿ ದೈವಗಳಿಗೆ ನೇಮೋತ್ಸಾವ ನಡೆದುದು ವಿಶೇಷ ವಾಗಿತ್ತು.‌

ಜ.22ರಂದು ಹಗಲು ಶಿರಾಡಿ, ಪೊಟ್ಟ, ಪುರುಷ, ಕಾರ್ಲತ್ತಾಯ, ಪೊಟ್ಟುಲು ಹಾಗೂ ರಾತ್ರಿ ಅಮ್ಲಾಜೆ ಬಿರ್ಮೆರ್, ದುರ್ಗೆಮಾದಿಮಾಳ್, ಬ್ರಾಹ್ಮಣ, ಬಚ್ಚನಾಯಕ, ಬಯಸು ನಾಯಕ, ಗಿಳಿರಾಮ ದೈವಗಳ ನೇಮೋತ್ಸವ ನಡೆಯಿತು.‌