ಗಣರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಸುಳ್ಯ ತಾಲೂಕಿನ ಸರಕಾರಿ ಇಲಾಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುವ 16 ಮಂದಿ ನೌಕರರನ್ನು ಗೌರವಿಸುವ ಕಾರ್ಯವನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ಹಮ್ಮಿಕೊಂಡಿದ್ದು, ಜ.26ರಂದು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗೌರವಿಸುವ ಕಾರ್ಯ ನಡೆಯಲಿದೆ.
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ತೀರ್ಥರಾಮ ಹೆಚ್.ಬಿ., ಕ್ಷೇತ್ರ ಸಂಪನ್ಮೂಲ ಕೇಂದ್ರದಿಂದ ಸುಬ್ರಹ್ಮಣ್ಯ ಕೆ.ಎನ್., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಶ್ರೀಮತಿ ಹಿಮಾಲೇಶ್ವರಿ ಎ.ಎ., ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಇಂಜಿನಿಯರ್ ಮಣಿಕಂಠ, ಕೆಪಿಎಸ್ ಗಾಂಧಿನಗರ ಸುಳ್ಯದ ಪ್ರಾಂಶುಪಾಲ ಅಬ್ದುಲ್ ಸಮದ್ ಎನ್, ತಾಲೂಕು ಪಂಚಾಯತ್ ನಿಂದ ಮ್ಯಾನೇಜರ್ ಹರೀಶ್ ಕೆ, ಸುಳ್ಯ ಉಪಖಾಜನೆಯ ಮುಖ್ಯ ಲೆಕ್ಕಿಗ ಪ್ರಕಾಶ್ ವಿ, ಸರ್ವೆ ಇಲಾಖೆಯ ತಾಲೂಕು ಸರ್ವೆಯರ್ ಜಗದೀಶ್ ಬಿ, ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ.ಆರ್., ಕಂದಾಯ ಇಲಾಖೆಯಿಂದ ಸುಳ್ಯ ವಿ.ಎ. ತಿಪ್ಪೇಶಪ್ಪ ಹೆಚ್.ಟಿ., ದೇವಚಳ್ಳ ವಿ.ಎ. ಮಧು ಕೆ.ಬಿ., ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯಿಂದ ಡಾ.ನಿತೀನ್ ಪ್ರಭು, ಕೃಷಿ ಇಲಾಖೆಯಿಂದ ಗೀತಾ ಕುಮಾರಿ ಬಿ.ಎಸ್., ಬಿಸಿಎಂ ಇಲಾಖೆಯಿಂದ ಅಡುಗೆ ಸಿಬ್ಬಂದಿ ನಾರಾಯಣ ಗೌಡ, ಸಮಾಜ ಕಲ್ಯಾಣ ಇಲಾಖೆಯಿಂದ ವಾರ್ಡನ್ ಬಾಲಕೃಷ್ಣ ಗೌಡ ರನ್ನು ಗೌರವಿಸಲಾಗುತ್ತಿದೆ.