ಅರಂತೋಡು ಹಾಗೂ ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಅಧ್ಯಯನ ಪ್ರವಾಸ

0
   ರಾಜ್ಯದ ಹತ್ತು  ಗ್ರಾಮ ಪಂಚಾಯತ್ ಗಳಿಗೆ ISO 9001 2015 ಸರ್ಟಿಫಿಕೇಟ್ ಪಡೆಯಲು ಆಯ್ಕೆಯಾದ ಅರಂತೋಡು ಮತ್ತು ಗುತ್ತಿಗಾರು ಗ್ರಾಮ ಪಂಚಾಯಿತಿನ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ  ಮೂರು ದಿನಗಳ ಅಧ್ಯಯನ ಪ್ರವಾಸವು ಜ.,23ರಿಂದ 25ರವರೆಗೆ ನಡೆಯಿತು.

ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ಸಂಸ್ಥೆ ಅಡಿಯಲ್ಲಿ ಮೈಸೂರು ಮತ್ತು ಕೇರಳ ರಾಜ್ಯದ ವಯನಾಡಿನ ಮುತ್ತಿಲ್ ಮೀನಂಗಾಡಿ ಮತ್ತು ನ್ಯೂಲ್ಪುಜ ಗ್ರಾಮ ಪಂಚಾಯತ್ ಗಳಿಗೆ ಮೂರು ದಿನಗಳ ಅಧ್ಯಯನ ಪ್ರವಾಸ ಏರ್ಪಡಿಸಲಾಗಿತ್ತು.
ಈ ಅಧ್ಯಯನ ಪ್ರವಾಸ ದಲ್ಲಿ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್. ಎಂ. ಅರ್., ಗುತ್ತಿಗಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ ತಾಲೂಕು ಪಂಚಾಯತ್ ಅಧಿಕಾರಿಯಾಗಿ ಸಂಪಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜ ಭಾಗವಹಿಸಿದ್ದರು.