ಗುತ್ತಿಗಾರು ಗ್ರಾಮದ ಮೊಗ್ರ ನಿವಾಸಿ ಗಿರಿಯಪ್ಪ ಅಜಿಲರವರು ಹೃದಯಘಾತದಿಂದ ಡಿ. 12ರಂದು ರಾತ್ರಿ ನಿಧನರಾದರು.
ಅವಿವಾಹಿತರಾಗಿದ್ದ ಅವರಿಗೆ 36 ವರ್ಷ ವಯಸ್ಸಾಗಿತ್ತು.
ಆರೋಗ್ಯದಿಂದಿದ್ದ ಅವರು ರಾತ್ರಿ ಊಟ ಮುಗಿಸಿ ಮಲಗುವ ಹೊತ್ತಿಗೆ ಮನೆಯಲ್ಲಿ ಹೃದಯಘಾತವಾಯಿತೆನ್ನಲಾಗಿದೆ.
ತಕ್ಷಣ ಅವರನ್ನು ಕಾಣಿಯೂರಿನ ಸರಕಾರಿ ಆಸ್ಪತ್ರೆಗೆ ಕರಕೊಂಡು ಹೋಯಿತ್ತಾದರೂ ಅಲ್ಲಿ ತಲುಪುವ ವೇಳೆಗೆ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಮೊಗ್ರ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಬಂಟ ದೈವ, ಬೇಡವ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಊರಿನಲ್ಲಿಯೂ ದೈವ ನರ್ತಕರಾಗಿ ಪ್ರಸಿದ್ಧಿಯಾಗಿದ್ದರು.
ಮೃತರು ತಂದೆ ದುಗ್ಗಣ್ಣ ಅಜಿಲ, ತಾಯಿ ಕುಸುಮಾವತಿ, ಸಹೋದರ ನೀಲಪ್ಪ, ಸಹೋದರಿ ನೀಲಾವತಿ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.