ಕೆವಿಜಿ ಪಾಲಿಟೆಕ್ನಿಕ್ : ರಾಷ್ಟ್ರೀಯ ಮತದಾರರ ದಿನಾಚರಣೆ

0

ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಚಂದ್ರಶೇಖರ ಎಂ
ಎನ್ , ದೇವರಾಜ್ ಜಿ.ಕೆ, ಸತ್ಯನಾರಾಯಣ ಪ್ರಸಾದ್, ಯತೀಶ ಕೆ.ಎನ್, ರಮಾದೇವಿ, ರವಿಶಂಕರ ಹೊಳ್ಳ, ಕಛೇರಿ ಅಧೀಕ್ಷಕ ಶಿವರಾಮ ಕೇರ್ಪಳ, ಪರೀಕ್ಷಾ ವಿಭಾಗದ ಅಧೀಕ್ಷಕ ಬಾಲಕ್ರಷ್ಣ ಮರಸಂಕ ತಮ್ಮ ತಮ್ಮ ವಿಭಾಗದ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು .


ಸಂಸ್ಥೆಯ ಪ್ರಾಂಶುಪಾಲ ಜಯಪ್ರಕಾಶ್ ಕೆ ಮತ್ತು ಉಪಪ್ರಾಂಶುಪಾಲ ಶ್ರೀಧರ್ ಎಂ.ಕೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.