ಬೆಳ್ಳಾರೆ: ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ಗಣರಾಜ್ಯೋತ್ಸವ ಸಮಾರಂಭ

0

ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ಜ. 26ರಂದು ಗಣರಾಜ್ಯೋತ್ಸವವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಶಾಲಾ ಪ್ರಾಂಶುಪಾಲೆ ಟಿ. ಎಮ್. ದೇಚಮ್ಮ ಧ್ವಜಾರೋಹಣ ನೆರವೇರಿಸಿ ಮಾತನಾಡಿ “ಧ್ವಜದ ಮಧ್ಯದಲ್ಲಿರುವ ಚಕ್ರವನ್ನು ಧರ್ಮಚಕ್ರ ಎಂದು ಕರೆಯುತ್ತೇವೆ ಅದರಲ್ಲಿ ಇರುವ ಇಪ್ಪತ್ತನಾಲ್ಕು ಕಡ್ಡಿಗಳು ಸರಳತೆ , ತ್ಯಾಗ, ಶಾಂತಿ ಹೀಗೆ ಇಪ್ಪತ್ತನಾಲ್ಕು ಕರ್ತವ್ಯಗಳನ್ನು ಸಂಕೇತಿಸುತ್ತವೆ. ಅವುಗಳನ್ನು ಪಾಲಿಸಬೇಕಾದುದು ನಮ್ಮ ಧರ್ಮ ಮತ್ತು ದೇಶಭಕ್ತಿಯನ್ನು ಸಾರುತ್ತದೆ” ಎಂದು ನುಡಿದರು.ನಂತರ ಶಾಲಾ ವಿದ್ಯಾರ್ಥಿಗಳಿಂದ ಸಮೂಹ ದೇಶಭಕ್ತಿಗೀತೆ, ನೃತ್ಯ ಪ್ರದರ್ಶನಗಳು ನಡೆದವು. ಶಾಲಾ ಶಿಕ್ಷಕಿಯರು ಗಣರಾಜ್ಯೋತ್ಸವ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳಾದ ಕು. ಶಾನ್ವಿ ಮತ್ತು ಕು. ಗಾನವಿ ಕಾರ್ಯಕ್ರಮ ನಿರೂಪಿಸಿದರು.