ಅಟೋ ಯೂನಿಯನ್ ಸಂಘದ ಬೆಳ್ಳಿ ಹಬ್ಬ : ಲಕ್ಕಿಡಿಪ್ ಪ್ರಥಮ‌ ಗೆದ್ದವರಿಗೆ ಬಹುಮಾನ ಹಸ್ತಾಂತರ

0

ಸುಳ್ಯ ತಾಲೂಕು ಅಟೋ ಚಾಲಕರ ಸಂಘ (ಬಿ.ಎಂ.ಎಸ್.) ದ ಬೆಳ್ಳಿ ಹಬ್ಬ ಸಂದರ್ಭದಲ್ಲಿ ಹೊರತರಲಾದ ಅದೃಷ್ಟ ಚೀಟಿ ಡ್ರಾದಲ್ಲಿ ಪ್ರಥಮ ಬಹುಮಾನ ತನ್ನದಾಗಿಸಿಕೊಂಡ ಮಧು ಫ್ಯಾನ್ಸಿ ಪಂಜ ಇವರಿಗೆ ಹಸ್ತಾಂತರ ‌ಕಾರ್ಯಕ್ರಮ ನಡೆಯಿತು.

ಹಳೆಗೇಟಿನ ತಿಲಕ ಭವನದಲ್ಲಿ ಪ್ರಥಮ ಬಹುಮಾನವನ್ನು ರಿಕ್ಷಾ ಯೂನಿಯನ್ ಅಧ್ಯಕ್ಷ ರಾಧಾಕೃಷ್ಣ ‌ಬೈತಡ್ಕ ಹಸ್ತಾಂತರ ಮಾಡಿ ಶುಭ‌ಹಾರೈಸಿದರು. ಈ‌ ಸಂದರ್ಭದಲ್ಲಿ ಉಪಾಧ್ಯಕ್ಷ ರವಿ ಜಾಲ್ಸೂರು, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ಕೋಶಾಧಿಕಾರಿ ‌ನಿತ್ಯಾನಂದ, ಮಾಜಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ, ಸಂಘಟನಾ ಕಾರ್ಯದರ್ಶಿ ಮನೋಹರ ಚೊಕ್ಕಾಡಿ
ಹಾಗೂ ನಿರ್ದೇಶಕರಾದ ಹರೀಶ್ ನೆಕ್ರಾಜೆ, ಕಾರ್ತಿಕ್ ಗಾಂಧಿನಗರ ಇದ್ದರು.