ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ

0

ಸುಳ್ಯದ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ
ವಾರ್ಷಿಕ ಮಹೋತ್ಸವ
ಜ.31ರಂದು ವಿಜೃಂಭಣೆಯಿಂದ ನಡೆಯಿತು. ವರ್ಷಕ್ಕೊಂದು ಬಾರಿ ಮಾತ್ರ ಗುತ್ಯಮ್ಮ ದೇವಿಯ ಗರ್ಭಗುಡಿಯ ಬಾಗಿಲು ತೆರೆಯುವ ಸಂಪ್ರದಾಯವಿದ್ದು, ಜ. 31ರಂದು ಗರ್ಭಗುಡಿ ತೆರೆದು ವಿಶೇಷ ಪೂಜೆ ನಡೆಸಲಾಯಿತು.

ಕ್ಷೇತ್ರದ ಧರ್ಮದರ್ಶಿಗಳಾದ ಡಾ. ರೇಣುಕಾಪ್ರಸಾದ್ ಕೆ.ವಿ. ಯವರ ನೇತೃತ್ವದಲ್ಲಿ ದೈವಜ್ಞರಾದ ಕಾರ್ಕಳ ಕೊಂಡೆಜಾಲು ಸೀತಾರಾಮ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಕ್ಷೇತ್ರದ ವಿಶೇಷ‌ ಪೂಜೆ, ವೈದಿಕ ಕಾರ್ಯಗಳು ನಡೆಯಿತು. ಬೆಳಗ್ಗೆ ಸ್ವಸ್ತಿ ಪುಣ್ಯಾಹವಾಚನೆ, ನಿರ್ಮಾಲ್ಯ ವಿಸರ್ಜನೆ, ಜಾತ ವೇದಸೆ ಮಂತ್ರ ಹೋಮ ಸಪ್ತಸತಿ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಹಲವು ಮಂದಿ ಭಕ್ತಾದಿಗಳು ದೇವತಾ ಕಾರ್ಯದಲ್ಲಿ ಭಾಗವಹಿಸಿ
ಗುತ್ಯಮ್ಮ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಡಾ. ಜ್ಯೋತಿ ಆರ್ ಪ್ರಸಾದ್, ಡಾ. ಜ್ಯೋತಿ ಆರ್.ಪ್ರಸಾದ್ ರವರ ತಂದೆ ಕೆ.ಪಿ. ಸುಬ್ಬಯ್ಯ ಬೆಂಗಳೂರು, ಡಾ. ಅಭಿಜ್ಞಾ ಆರ್. ಪ್ರಸಾದ್, ಡಾ. ಅಭಿಜ್ಞಾರ ಪತಿ ಗೋಕುಲ್ ಬೆಂಗಳೂರು, ಮೌರ್ಯ ಆರ್. ಪ್ರಸಾದ್, ಎಒಎಲ್‌ಇ ಬಿ ಕಮಿಟಿಯ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಶಾಸಕಿ ಭಾಗೀರಥಿ ಮುರುಳ್ಯ, ಕೆ.ವಿ.ಜಿ.ಪಿ. ನಿವೃತ್ತ ಪ್ರಾಂಶುಪಾಲರಾದ ಜಯಪ್ರಕಾಶ್ ಕಲ್ಲುಗದ್ದೆ, ಪ್ರಾಂಶುಪಾಲರಾದ ಶ್ರೀಧರ್, ಕಚೇರಿ ವ್ಯವಸ್ಥಾಪಕರಾದ ಶಿವರಾಮ ಕೇರ್ಪಳ, ಧನಂಜಯ ಕಲ್ಲುಗದ್ದೆ, ಪ್ರಸನ್ನ ಕಲ್ಲಾಜೆ, ಕೆ.ವಿ.ಜಿ.ಡಿ.ಸಿ. ಆಡಳಿತಾಧಿಕಾರಿ ಮಾಧವ ಬಿ.ಟಿ, ಕೆ.ವಿ.ಜಿ. ಐ.ಟಿ.ಐ. ಪ್ರಾಂಶುಪಾಲರಾದ ಚಿದಾನಂದ ಗೌಡ ಬಾಳಿಲ, ಉಪನ್ಯಾಸಕರಾದ ಭವಾನಿಶಂಕರ ಅಡ್ತಲೆ, ತರಬೇತಿ ಅಧಿಕಾರಿ ದಿನೇಶ್‌ ಮಡ್ತಿಲ, ಕೆ.ವಿ.ಜಿ.ಸಿ.ಇ. ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ, ಕೆ.ವಿ.ಜಿ.ಡಿ.ಸಿ. ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್, ಪ್ರಾಧ್ಯಾಪಕರಾದ ಡಾ. ಮನೋಜ್ ಅಡ್ಡಂತಡ್ಕ, ಡಾ. ರೇವಂತ್ ಸೂಂತೋಡು, ಕೆ.ವಿ.ಜಿ.ಅ.ಜ್ಯೋ.ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋದಾ ರಾಮಚಂದ್ರ, ಉಪ ಪ್ರಾಂಶುಪಾಲರಾದ ದೀಪಕ್ ವೈ.ಆರ್, ಕುವೆಂಪು ವಿ.ವಿ. ವಿಶ್ರಾಂತ
ಉಪಕುಲಪತಿ ಡಾ. ಚಿದಾನಂದ ಕೊಳಂಬೆ, ಅರುಣ್ ಕುರುಂಜಿ, ಕಮಲಾಕ್ಷ ನಂಗಾರು, ಚಂದ್ರಶೇಖರ ಬಿಳಿಮಲೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಸಿಬ್ಬಂದಿಗಳು, ಪ್ರಮುಖರಾದ ನಿತ್ಯಾನಂದ
ಮುಂಡೋಡಿ, ಭರತ್ ಮುಂಡೋಡಿ, ಎನ್.ಎ.ರಾಮಚಂದ್ರ,
ಎಂ.ಬಿ.ಸದಾಶಿವ, ಪಿ.ಸಿ.ಜಯರಾಮ, ವೆಂಕಟ್ ದಂಬೆಕೋಡಿ, ಹರೀಶ್ ಕಂಜಿಪಿಲಿ, ಸುನಿಲ್ ಕೇರ್ಪಳ, ಪುರೋಹಿತ ನಾಗರಾಜ ಭಟ್, ಜೀವನ್ ರಾಂ ಸುಳ್ಯ, ಪಿ.ಎಸ್.ಗಂಗಾಧರ, ವಿನಯಕುಮಾರ್, ಸೂರಯ್ಯ ಸೂಂತೋಡು,
ಕಂದಡ್ಕ, ಜಯಪ್ರಕಾಶ್
ಕುಂಚಡ್ಕ, ಸಂತೋಷ್ ಕುತ್ತಮೊಟ್ಟೆ, ಪದ್ಮಾ ಕೋಲ್ಚಾರು ಮತ್ತಿತರ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.