ರಾಷ್ಟ್ರೀಯ ಸ್ಮಾರ್ಟ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ 6ನೇ ರ್‍ಯಾಂಕ್ ಪಡೆದ ಗಾಂಧಿನಗರ ಮದರಸ ವಿದ್ಯಾರ್ಥಿನಿ

0

ಎಸ್ ಜೆ ಎಂ ಕೇಂದ್ರ ಸಮಿತಿ ಹಮ್ಮಿಕೊಂಡಿದ್ದ ಸ್ಮಾರ್ಟ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಸುಳ್ಯ ಗಾಂಧಿನಗರ ಮುನವ್ವರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸದ ಹತ್ತನೆಯ ತರಗತಿ ವಿದ್ಯಾರ್ಥಿನಿ ಫಾತಿಮತ್ ಶೈಮಾ ಎಸ್ ಎಂ ಆರನೇ ರ್ಯಾಂಕ್ ಪಡೆದು ಮದರಸಕ್ಕೆ ಕೀರ್ತಿ ತಂದಿದ್ದಾರೆ.


ಕೇರಳ, ಕರ್ನಾಟಕ ,ತಮಿಳುನಾಡು ಮತ್ತು ಜಿಸಿಸಿ ಕಂಟ್ರಿಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ 6ನೇ ರ್‍ಯಾಂಕ್ ಹಾಗೂ ಜಿಲ್ಲೆಗೆ ದ್ವಿತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.
ಇವರು ಸುಳ್ಯ ಗಾಂಧಿನಗರ ನಿವಾಸಿ ಮಜೀದ್ ಕೆ ಬಿ ಮತ್ತು ಮಿಸ್ರಿಯಾ ದಂಪತಿಗಳ ಪುತ್ರಿಯಾಗಿದ್ದಾರೆ.