ರೋಟರಿ ಶಾಲಾ ಸಮಾಲೋಚನಾ ಸಭೆ

0

ರೋಟರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಗಳು, ಸುಳ್ಯ ಮತ್ತು ಶಾಲಾ ಆಡಳಿತ ಮಂಡಳಿಯಾದ ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇವುಗಳ ಸಮಾಲೋಚನಾ ಸಭೆ ರೋಟರಿ ಸಮುದಾಯ ಭವನ, ರಥಬೀದಿ, ಸುಳ್ಯ ಇಲ್ಲಿ ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ರೊಟೇರಿಯನ್ ಆನಂದ ಖಂಡಿಗ ಇವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 3ರಂದು ನಡೆಯಿತು.


ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರು, ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು, ಶಾಲಾ ಶಿಕ್ಷಕ, ಶಿಕ್ಷಕೇತರ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು. ಶಾಲಾ ಒಳಿತು/ ಕೆಡುಕುಗಳ ಬಗ್ಗೆ ಅಭಿಪ್ರಾಯ ಮಂಡಿಸಲು ಸಿಬ್ಬಂದಿಗಳಿಗೆ ಆಡಳಿತ ಮಂಡಳಿಯವರು ಅವಕಾಶ ನೀಡಿದ್ದರು, ಪ್ರೀ ನರ್ಸರಿ ಯಿಂದ ಆರಂಭಿಸಿ ಪಿ. ಯು. ಸಿ. ವರೆಗಿನ ಬಹುತೇಕ ಎಲ್ಲಾ ಸಿಬ್ಬಂದಿಗಳು ಅಭಿಪ್ರಾಯ ಮಂಡಿಸಿದರು.

ಶಾಲಾ ಸಂಚಾಲಕರಾದ ರೊಟೇರಿಯನ್ ಪಿ. ಪಿ., ಪಿ ಹೆಚ್ ಎಫ್ ಗಿರಿಜಾ ಶಂಕರ ತುದಿಯಡ್ಕ ರವರು ಹಾಗೂ ಸಭಾಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ನ ಅಧ್ಯಕ್ಷರು, ಆಡಳಿತ ಮಂಡಳಿ ಚೆಯರ್ ಮ್ಯಾನ್ ರೊಟೇರಿಯನ್ ಆನಂದ ಖಂಡಿಗ ರವರು ಶಾಲಾ ಆಗು -ಹೋಗು ಗಳ ಬಗ್ಗೆ ಸಿಬ್ಬಂದಿಗಳ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳನ್ನು ಸ್ವೀಕರಿಸಿ, ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು.

ಟ್ರಸ್ಟಿ ಗಳಾದ ರೊಟೇರಿಯನ್ ಪಿ. ಪಿ.ಪಿಹೆಚ್ಎಫ್ ದಯಾನಂದ ಆಳ್ವ, ರೊಟೇರಿಯನ್ ಮಹಾಲಕ್ಷ್ಮಿ ಕೊರಂಬಡ್ಕ ಮತ್ತು ರೊಟೇರಿಯನ್ ಪಿ.ಪಿ.ಪಿ ಹೆಚ್ ಎಫ್ ಪ್ರಭಾಕರ ನಾಯರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಕೆ ಎಸ್ ರವರು ಮಾತನಾಡಿದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ರವರು ಸ್ವಾಗತಿಸಿ, ಧನ್ಯವಾದಗೈದರು. ಸಹಶಿಕ್ಷಕಿ ಶ್ರೀಮತಿ ರಶ್ಮಿ ಎಸ್ ಎನ್ ಪ್ರಾರ್ಥಿಸಿದರು.