ಪಂಜ ಜಾತ್ರೆ: ಮಕ್ಕಳನ್ನು ಆಕರ್ಷಿಸುತ್ತಿದೆ ಕೊಲಂಬಸ್ , ರೈಲು ಬಂಡಿ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗುತ್ತಿದ್ದು ಇಂದು ಫೆ.6 ರಂದು ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಲಿದೆ.

ವಿಶೇಷವಾಗಿ ಜಾತ್ರಾ ಮೈದಾನದಲ್ಲಿ ಕೊಲಂಬಸ್ (ಹಡಗು), ರೈಲು ಬಂಡಿ, ತಿರುಗುವ ಕಾರುಗಳು, ಜಾರುಬಂಡಿ , ಏರೋಪ್ಲೇನ್ ಮೊದಲಾದವುಗಳು ಮಕ್ಕಳನ್ನು ಆಕರ್ಷಿಸುತ್ತಿದೆ.

ಗೃಹಪಯೋಗಿ ವಸ್ತುಗಳು , ಆಟಿಕೆಗಳು, ಹೂವಿನ ಗಿಡಗಳು, ತಿಂಡಿ ತಿನಿಸುಗಳ ಮಳಿಗೆ ಯಿಂದ ಈ ವರುಷ ಜಾತ್ರಾ ಮೈದಾನ ತುಂಬಿದೆ.