ಸುಳ್ಯ ನಗರ ಪಂಚಾಯತ್ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಲ್ಲುಮುಟ್ಲು ರೇಚಕ ಸ್ಥಾವರದಲ್ಲಿ ಹೂಳೆತ್ತುವ ಕಾರ್ಯ ಜನವರಿ 15 ಮತ್ತು ಜನವರಿ 16 ರಂದು ನಡೆಯಲಿರುವುದರಿಂದ ಈ ಎರಡು ದಿನ ಕುಡಿಯುವ ನೀರು ಸರಬರಾಜು ಇರುವುದಿಲ್ಲ ಎಂದು ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯವರು ತಿಳಿಸಿದ್ದಾರೆ. ಬೋರ್ ವೆಲ್ ಗಳಿಂದ ನೀರು ಸರಬರಾಜಾಗುವ ಕಡೆಗಳಲ್ಲಿ ಕೂಡ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.