ಪೇರಡ್ಕ ವಲಿಯುಲ್ಲಾಹಿ ದರ್ಗಾ ಷರೀಫ್ ಮಖಾಂ ಉರೂಸ್

0

ಅನಾದಿಕಾಲದಿಂದಲೂ ಪೇರಡ್ಕ ಸೌಹಾರ್ದತೆಯ ಪ್ರದೇಶ: ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್

ಸರ್ವರಿಂದಲು ಗೌರವಿಸಲ್ಪಡುವ ಸಂಪಾಜೆ ಗ್ರಾಮದ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ನ ಉರೂಸ್ ಸಮಾರಂಭವು ಫೆ.9ರಂದು ರಾತ್ರಿ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಟಿ ಎಂ ಶಹೀದ್ ವಹಿಸಿದರು.
ಸಭಾ ಕಾರ್ಯಕ್ರಮವನ್ನು ಸಯ್ಯದ್ ಜೈನುಲ್ ಆಬಿದೀನ್ ಜೀಫ್ರಿ ತಂಙಳ್ ಉದ್ಘಾಟಿಸಿದರು.
ದುವಾ ವನ್ನು ಸ್ಥಳೀಯ ಖತೀಬ್ ರಾದ ರಿಯಾಜ್ ಫೈಝಿ ನೆರವೇರಿಸಿದರು.

ಸಮಾರಂಭಕ್ಕೆ ರಾಜ್ಯ ವಿಧಾನಸಭಾ ಅಧ್ಯಕ್ಷ ಯು. ಟಿ. ಖಾದರ್ ಅವರು ಅಗಮಿಸಿ ಮಾತನಾಡಿ ಪೇರಡ್ಕ ಅನಾದಿಕಾಲದಿಂದಲೂ ಸೌಹಾರ್ದತೆ ಯ ಪ್ರದೇಶ ಇಲ್ಲಿಯ ಪುಣ್ಯ ದರ್ಗಾಕ್ಕೆ ಭೇಟಿ ನೀಡುವ ಹಲವಾರು ಸರ್ವ ಧರ್ಮಿಯರು ಪಾಲ್ಗೂಳ್ಳುತ್ತಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಅವರನ್ನು ಮಸೀದಿಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಧಾರ್ಮಿಕ ಪ್ರವಚನ ನೀಡಿದರು. ಕಲ್ಲುಗುಂಡಿ ಜುಮ್ಮಾ ಮಸೀದಿ ಖತಿಬರಾದ ನಹೀಂ ಫೈಝಿ .ಅರಂತೋಡು ಜುಮ್ಮಾ ಮಸೀದಿ ಖತಿಬರಾದ ಹಾಜಿ ಐಸಾಕ್ ಬಾಖವಿ,ಎಂ.ಜಿ.ಎಂ.ಮಾಜಿ ಅಧ್ಯಕ್ಷ. ಬಾಬಾ ಹಾಜಿ, ಉಮ್ಮರ್ ಬೀಜದ ಕಟ್ಟೆ, ಹ್ಯಾರೀಸ್ ಪೇರಡ್ಕ, ಸುಳ್ಯ ರೇಂಜ್ ಜಮೀಯತುಲ್ ಮುಅಲ್ಲಿಮ್ ಅಧ್ಯಕ್ಷ ಅಬ್ದುಲ್ ಖಾದರ್ ಫೈಜಿ, ತಾಜ್ ಮಹಮ್ಮದ್ ಸಂಪಾಜೆ, ಎ.ಕೆ.ಹಸೈನಾರ್,
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ.ಹನೀಫ್, ಹಮೀದ್ ಹಾಜಿ ಸುಳ್ಯ,ಅಶ್ರಫ್ ಗುಂಡಿ,ಸೇರಿದಂತೆ ಮುಂತಾದವರು ಉಸ್ಥಿತರಿದ್ದರು. ಜಿ.ಕೆ. ಹಮೀದ್ ಸ್ವಾಗತಿಸಿದರು.