ಹರಿಹರ ಪಲ್ಲತಡ್ಕದಲ್ಲಿ ಕಟ್ಟೆ ಮನೆ ಪ್ರೀಮಿಯರ್ ಲೀಗ್

0

ಖಂಡಿಗೆ ಬ್ರದರ್ಸ್ ಪ್ರಥಮ, ದೋಲ್ಪಾಡಿ ಬ್ರದರ್ಸ್ ದ್ವಿತೀಯ

ಹರಿಹರ ಪಲ್ಲತಡ್ಕದಲ್ಲಿ ಐದು ಗ್ರಾಮಗಳನ್ನೊಳಗೊಂಡ ಕಟ್ಟೆಮನೆ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟ ಫೆ.10 ರಂದು ರಾತ್ರಿ ನಡೆಯಿತು. ಪಂದ್ಯಾಟವನ್ನು ವಿಧಾನ ಸಭೆಯ ಅಧ್ಯಕ್ಷ ಯು.ಟಿ ಖಾದರ್ ಉದ್ಘಾಟಿಸಿದರು.

ಪ್ರಥಮ ಸ್ಥಾನವನ್ನು ಸಂಪತ್ ಮಾಲಕತ್ವದ ಖಂಡಿಗೆ ಬ್ರದರ್ಸ್, ದ್ವಿತೀಯ ಸ್ಥಾನವನ್ನು ಭಾಸ್ಕರ ದೋಲ್ಪಾಡಿ ಮಾಲಕತ್ವದ ದೋಲ್ಪಾಡಿ ಬ್ರದರ್ಸ್ ಪಡೆಯಿತು.

ಉಜ್ವಲ್  ಕಜ್ಜೋಡಿ, ಬೆಳ್ಯಪ್ಪ ಖಂಡಿಗೆ,  ವಿನೂಪ್ ಮಲ್ಲಾರ, ಸೋಮಶೇಖರ ಕಟ್ಟೆಮನೆ, ಉಲ್ಲಾಸ್ ಮುಚ್ಚಾರ, ಸಂಪತ್ ಖಂಡಿಗೆ, ಮುಧು ಗೊಳ್ಯಾಡಿ, ಪ್ರಿಯ ಕಲ್ಲೇಮಠ, ಮಂಜುನಾಥ್ ಕೂಜುಗೋಡು ಪ್ರದಾನ್ ಕಟ್ಟೆಮನೆ, ಚೇತನ್ ಕಜೆಗದ್ದೆ, ವಿಜಯ್ ಮೆಸ್ಕಾಂ, ಸತೀಶ್ ಕಟ್ಟೆಮನೆ, ಚೇತನ್ ಕಲ್ಲೇಮಠ, ಸತೀಶ್ ಕಟ್ಟೆಮನೆ, ನಾಣಯ್ಯ ಸುಬ್ರಹ್ಮಣ್ಯ, ವಸಂತ್ ಬಂಗೇರ ಸುಬ್ರಹ್ಮಣ್ಯ, ಪೃಥ್ವಿ ಮುಂಡಾಜೆ, ಬಾಲಚಂದ್ರ ಹರಿಹರ. ಪ್ರಮೋದ್ ಬಾಳುಗೋಡು ಮತ್ತಿತರರು ಟಿ.ಎಂ ಶಹೀದ್, ಸಿದ್ದೀಕ್ ಕೊಕ್ಕೋ ಮತ್ತಿತರರು ಉಪಸ್ಥಿತರಿದ್ದರು.