ಬಾಳುಗೋಡು ಸ.ಹಿ.ಪ್ರಾ.ಶಾಲಾ ಕೊಠಡಿ ಉದ್ಘಾಟನೆ

0

ಸ.ಹಿ. ಪ್ರಾ. ಶಾಲೆ ಬಾಳುಗೋಡು ಇಲ್ಲಿಗೆ ಮಾಜಿ ಸಚಿವರಾದ ಅಂಗಾರ ಎಸ್ ಅವರು ಒದಗಿಸಿದ ಅನುದಾನದಲ್ಲಿ ನಿರ್ಮಾಣ ವಾದ ನೂತನ ಶಾಲಾ ವಿವೇಕ ಕೊಠಡಿಗಳನ್ನು ಶಾಸಕಿಯಾದ ಕುl ಭಾಗೀರಥಿ ಮುರುಳ್ಯ ಫೆ. 7 ರಂದು ಉದ್ಘಾಟಿಸಿದರು.
ಹರಿಹರ ಗ್ರಾ. ಪಂ ಅಧ್ಯಕ್ಷರಾದ ವಿಜಯ ಅಂಙಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಿಇಓ ರಮೇಶ್, ಗ್ರಾ.ಪಂ ಸದಸ್ಯರು, ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ಶಿವಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಗುರುಗಳಾದ ಶ್ರೀಮತಿ ಶುಭ ಕೆ ಸ್ವಾಗತಿಸಿ, ಗೌರವ ಶಿಕ್ಷಕಿ ಸುದರ್ಶನಿ ವಂದಿಸಿದರು. ಅಜೇಯ ಪೊಯ್ಯಮಜಲು ಕಾರ್ಯಕ್ರಮ ನಿರೂಪಿಸಿದರು.