ಅರಂಬೂರು ಭಾರದ್ವಾಜಾಶ್ರಮದ ವೇದ ಅದ್ಯಾಪಕ ವೆಂಕಟೇಶ ಶಾಸ್ತ್ರೀ ಹವ್ಯಕ ವೇದರತ್ನ ಪ್ರಶಸ್ತಿಗೆ ಆಯ್ಕೆ

0

ಆಲೆಟ್ಟಿ ಗ್ರಾಮದ ಅರಂಬೂರಿನ ಭಾರದ್ವಾಜಾಶ್ರಮದ ಕಾಂಚಿ ಕಾಮಕೋಟಿ ವೇದ ಪಾಠ ಶಾಲೆಯ ಅದ್ಯಾಪಕ ವೇದಮೂರ್ತಿ ವೆಂಕಟೇಶಶಾಸ್ತ್ರೀಯವರು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡ ಮಾಡಲ್ಪಡುವ ವೇದರತ್ನ ಪ್ರಶಸ್ತಿಗೆಆಯ್ಕೆಯಾಗಿರುತ್ತಾರೆ.

ಡಿ. 27 ರಿಂದ 29 ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿಪ್ರಧಾನವಾಗಲಿರುವುದು.

ಇವರು ಪ್ರಸ್ತುತ ಅರಂಬೂರಿನಲ್ಲಿ ವೇದ ವಿದ್ಯಾಲಯದಲ್ಲಿ ಅದ್ಯಾಪಕಾರಾಗಿದ್ದು ವೇದ ವಾಹಿನಿ ಎಂಬ ಆನ್ ಲೈನ್ ವೇದ ತರಗತಿಯ ಮೂಲಕ ವೇದ ಪಾಠವನ್ನು ದೇಶ ವಿದೇಶಗಳಲ್ಲಿ ಇರುವ ಶಿಷ್ಯರಿಗೆ ಕಳೆದ 4 ವರುಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರುವಿನ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರೀ ಮತ್ತು ಶ್ರೀಮತಿ ಶಾರದಾ ದಂಪತಿಯ ಪುತ್ರರಾಗಿದ್ದಾರೆ.