ನೂತನ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಆಯ್ಕೆಗೆ ಚುನಾವಣೆ ಹಿನ್ನೆಲೆ
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 9 ಮಂದಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಆಯ್ಕೆಗೆ ಡಿ.23ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಒಂಭತ್ತು ಮಂದಿ ಅಭ್ಯರ್ಥಿಗಳು ಡಿ.12ರಂದು ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಜಗದೀಶ್ ಕೆ.ಪಿ., ಲೋಕನಾಥ್ ಎಸ್.ಪಿ., ಶ್ರೀಧರ ದುಗ್ಗಳ, ಗಣಪತಿ ಭಟ್ ಪಿ.ಎನ್., ಆನಂದ ಪಿ.ಎಲ್., ಮನೀಶ್ ಆರ್.ಜಿ., ಸದಾನಂದ ರೈ ಕೆ.ಎಂ., ಹಿಂದುಳಿದ ವರ್ಗ ಪ್ರವರ್ಗ ಬಿಯಿಂದ ವರದರಾಜ್ ಎಸ್.ಟಿ., ಪರಿಶಿಷ್ಟ ಪಂಗಡದಿಂದ ಜಗದೀಶ್ ಜಿ.ವಿ. ಅವರು ಚುನಾವಣಾ ಅಧಿಕಾರಿಗಳಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.