ಸುಳ್ಯ ಪಿ.ಎಲ್.ಡಿ. ಬ್ಯಾಂಕಿನ ಚುನಾವಣೆ

0

ಮತ್ತೆ ಆಡಳಿತ ಮಂಡಳಿಯ ಅಧಿಕಾರ ಬಿಜೆಪಿ ಪಾಲಿಗೆ

7 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 5 ಬಿಜೆಪಿ, 1 ಬಂಡಾಯ,
1 ಸ್ಥಾನ ಕಾಂಗ್ರೆಸ್ ತೆಕ್ಕೆಗೆ

ಚೀಟಿ ಎತ್ತುವ ಮೂಲಕ ಒಂದು ಸ್ಥಾನ ಬಿಜೆಪಿ ಖಾತೆಗೆ

ಸುಳ್ಯ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಗೆ 7 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 5 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಉಳಿದ ಎರಡರಲ್ಲಿ ಒಂದು ಸ್ಥಾನ ಕಾಂಗ್ರೆಸ್ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಒಬ್ಬರು ಗೆಲುವು ಸಾಧಿಸಿದ್ದು ಮತ್ತೆ ಆಡಳಿತ ದ ಅಧಿಕಾರವನ್ನು ಬಿಜೆಪಿ ಉಳಿಸಿಕೊಂಡಿದೆ.

ತಾಲೂಕಿನ ಒಟ್ಟು 14 ವಲಯಗಳಲ್ಲಿ 23 ನಾಮಪತ್ರ ಸಲ್ಲಿಕೆಯಾಗಿದ್ದು ಚುನಾವಣೆ ನಡೆಯಲಿರುವ 7 ಸ್ಥಾನಗಳಿಗೆ 16 ಮಂದಿ ಚುನಾವಣಾ ಕಣದಲ್ಲಿದ್ದರು.

ಬೆಳ್ಳಾರೆ ಮಹಿಳಾ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಶಾಲಾಕ್ಷಿ, ಎಣ್ಮೂರು ಪ.ಜಾತಿ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಕೊಲ್ಲಮೊಗ್ರ ಮಹಿಳಾ ಮೀಸಲು ‌ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ‌ಅಭ್ಯರ್ಥಿ ಸವಿತಾ ಕೆ.ಜೆ, ಮಡಪ್ಪಾಡಿ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ರಮೇಶ್ ಪಿ, ಕಳಂಜ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಈಶ್ವರಚಂದ್ರ ಎಂ, ಪಂಬೆತ್ತಾಡಿ ಸಾಮಾನ್ಯ ಕ್ಷೇತ್ರದಲ್ಲಿ ‌ಬಿಜೆಪಿ ಬೆಂಬಲಿತ ‌ಅಭ್ಯರ್ಥಿ ಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಚ್ಚುತ ಕೆ ಯವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಉಳಿದ 7 ಸ್ಥಾನಗಳಿಗೆ ಜ.12 ರಂದು ನಡೆದ ಚುನಾವಣೆಯಲ್ಲಿ
ಜಾಲ್ಸೂರು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯರಾಮ ರೈ ಕೆ ಯವರು 17 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಂಡಾಯ ಅಭ್ಯರ್ಥಿ ಸುರೇಶ್ ಕೆ ಯವರು 12 ಮತ ಪಡೆದು ಪರಾಭವಗೊಂಡಿದ್ದಾರೆ.

ನೆಲ್ಲೂರು ಕೆಮ್ರಾಜೆ ಹಿಂದುಳಿದ ವರ್ಗ ಬಿ” ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾವೀರ ಜಿ ಯವರು 19 ಮತ ಪಡೆದು ವಿಜಯಿಯಾದರು.
ಬಿಜೆಪಿ ಬಂಡಾಯ ಅಭ್ಯರ್ಥಿ ದೇವಿಪ್ರಸಾದ್ ಎಸ್ 15 ಮತ ಪಡೆದು ಸೋಲು ಕಂಡರು. ಸುಳ್ಯ ಹಿಂದುಳಿದ ವರ್ಗ ಎ” ಸ್ಥಾನಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿ ಜ್ಞಾನೇಶ್ವರ ಶೇಟ್ 24 ಮತ ಪಡೆದು ಜಯಗಳಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೋಮನಾಥ ಪೂಜಾರಿ ಪರಾಭವ ಹೊಂದಿದರು.

ಆಲೆಟ್ಟಿ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮಪಾಲ ಕೆ ಯವರು 19 ಮತ ಪಡೆದು ವಿಜಯಿಯಾಗಿದ್ದಾರೆ.
ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಜಯ ಪಡ್ಡಂಬೈಲು 11 ಮತ ಪಡೆದು ಸೋಲುಂಡರು. ಐವರ್ನಾಡು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಣಪಯ್ಯ ಪಿ 12 ಮತ ಪಡೆದರೆ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ ಪಿ ಯವರು 12 ಮತ ಪಡೆದು ಸಮಾನತೆಯನ್ನು ಕಾಯ್ದುಕೊಂಡರು.
ಟಾಸ್ ಆಯ್ಕೆ ಮೂಲಕ ಗಣಪಯ್ಯ ರವರು ಅದೃಷ್ಟದ ಗೆಲುವು ಸಾಧಿಸಿಕೊಂಡರು.

ಗುತ್ತಿಗಾರು ಕ್ಷೇತ್ರದಲ್ಲಿ ಪ.ಪಂ.ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾವೇರಿ ಕೆ 7 ಮತ ಪಡೆದು ವಿಜಯಿಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಾಲಕೃಷ್ಣ ಬಿ ಪರಾಭವ ಹೊಂದಿದರು.
ಸಾಲಗಾರರಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಅವಿನಾಶ್ ಡಿ.ಕೆ 222 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಂಡಾಯ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು‌ ರವರು 135 ಮತ ಪಡೆದುಪರಾಭವಗೊಂಡರು.

ಆಡಳಿತ ಮಂಡಳಿ ನಡೆಸಲು ಒಟ್ಟು 14 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು 12 ಸ್ಥಾನಗಳನ್ನು ‌ಕಾಯ್ದುಕೊಂಡು ಅಧಿಕಾರದ ಚುಕ್ಕಾಣಿಯನ್ನು ಮತ್ತೆ ತಮ್ಮದಾಗಿಸಿಕೊಂಡಿದ್ದಾರೆ.