ಹಾಜಿ ಅಹಮ್ಮದ್ ಕುಂಞಿ ಪಟೇಲ್ ಅರಂತೋಡು ನಿಧನ

0

ಅರಂತೋಡು ಗ್ರಾಮದ ಹಿರಿಯ ವ್ಯಾಪಾರಿ ಹಾಜಿ ಅಹಮ್ಮದ್ ಕುಂಞಿ ಪಟೇಲ್ ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಡಿ.13ರಂದು ಮುಂಜಾನೆ ನಿಧನರಾದರು.
ಅವರಿಗೆ 82 ವರ್ಷ ವಯಸ್ಸಾಗಿತ್ತು.

ಹಾಜಿ ಅಹಮ್ಮದ್ ಕುಂಞಿ ಪಟೇಲ್ ಅವರು ಅರಂತೋಡು ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಸ್ಥಾಪಕ ಕಾರ್ಯದರ್ಶಿಯಾಗಿ, ಅರಂತೋಡು ನೆಹರೂ ಸ್ಮಾರಕ ಪಿ.ಯು.ಕಾಲೇಜಿನ ಪಾಪ್ಯುಲರ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ, ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪುತ್ರರಾದ ಬದ್ರುದ್ದೀನ್, ನಾಸಿರುದ್ದೀನ್, ಸೈಫುದ್ದೀನ್, ಹಬೀಬ್ ರಹಿಮಾನ್, ಸಲಾಹುದ್ದೀನ್, ಜಲಾಲುದ್ದೀನ್, ಮರ್ಹೂಮ್ ಅಮೀನ್ , ಮರ್ಹೂಮ್ ಶಿಹಾಬ್ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.