ದಿನೇಶ ಶೆಟ್ಟಿಗೆ ಪ್ರೇಮಜಿ ಫೌಂಡೇಶನ್‌ನಿಂದ ಗೌರವ ಸನ್ಮಾನ

0

ರೋಟರಿ ಮಿಟ್‌ಡೌನ್ ಕ್ಲಬ್‌ನ ಅಧ್ಯಕ್ಷರಾಗಿ ವಿವಿಧ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ದಿನೇಶ ಶೆಟ್ಟಿ ಅವರ ಸೇವೆಯನ್ನು ಗುರುತಿಸಿ ವಿಮಾನ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಪ್ರೇಮ್ ಜಿ ಫೌಂಡೇಶನ್ ಮತ್ತು ಪಿ ಆ್ಯಂಡ್ ಜಿ ಮೀಡಿಯಾ ಕಮ್ಯುನಿಕೇಶನ್ಸ್ ಅಡಿಯಲ್ಲಿ ಪ್ರೇಮ್ ಜಿ ಅಚೀವರ್ಸ್ ಅವಾರ್ಡ್ಸ್- 2024ರ ಇಂದು ಮುಂಜಾನೆ, ಸಂಜೆ ಮಾಧ್ಯಮ ದಿನಪತ್ರಿಕೆಗಳು ಮತ್ತು ಯುನಿವರ್ಸಲ್ ಡಿಜೆಟಲ್ ನ್ಯೂಸ್ ಸಹಯೋಗದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಮಹೇಶ ಟೆಂಗಿನಕಾಯಿ, ಸ್ವರ್ಣಾ ಸಮೂಹ ಸಂಸ್ಥೆ ಮುಖ್ಯಸ್ಥ ವಿ.ಎಸ್.ವಿ ಪ್ರಸಾದ, ಚಲನಚಿತ್ರ ನಟರಾದ ರಮೇಶ ಭಟ್, ವಿಕ್ರಂ ಸೂರಿ, ಬಾಲಿವುಡ್ ಮಿಸಸ್ ಇಂಡಿಂ- ಮಾ ಜ್ಯೋತಿ ಕತ್ತಿ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಪ್ರೇಮಜಿ ಫೌಂಡೇಶನ್ ಸಂಸ್ಥಾಪಕ ಗುರುರಾಜ ಹೂಗಾರ ಸೇರಿದಂತೆ ಮತ್ತಿತರರು ಇದ್ದರು.

ದಿನೇಶ್ ಶೆಟ್ಟಿಯವರು ಸುಳ್ಯ ತಾಲೂಕಿನ ಬೆಳ್ಳಾರೆಯವರಾಗಿದ್ದು , ದರ್ಖಾಸ್ತು ನಿವಾಸಿ ಸಂಜೀವ ಶೆಟ್ಟಿ ಹಾಗೂ ದಿ.ಶಶಿಕಲಾ ಶೆಟ್ಟಿಯವರ ಪುತ್ರ. ಹುಬ್ಬಳ್ಳಿಯಲ್ಲಿ ಗ್ಲೋಬಲ್ ಮೀಡಿಯಾ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ.