ಸುಳ್ಯ ಸೆಂಟರ್ ನಲ್ಲಿ ವೆಲೊರಿ ಎಂಪೈರ್ ವಸ್ತ್ರ ಮಳಿಗೆ ಶುಭಾರಂಭ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯ ಸುಳ್ಯ ಸೆಂಟರ್ ನಲ್ಲಿ ಕುಕ್ಕುಜಡ್ಕದ ಅನುಷ್ ಮಂಜುನಾಥ್ ರವರ ಮಾಲಕತ್ವದ ವೆಲೊರಿ ಎಂಪೈರ್ ನೂತನ ವಸ್ತ್ರ ಮಳಿಗೆಯು ಜ.13 ರಂದು ಶುಭಾರಂಭಗೊಂಡಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ.ಮಳಿಗೆಯನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಪುತ್ತೂರು ನಿರಾಳ ಬಾರ್ & ರೆಸ್ಟೋರೆಂಟ್ ಮಾಲಕ ನಿರೀಕ್ಷಿತ್ ರೈ ಮತ್ತು ಶ್ರೀಮತಿ ಅಶ್ವಿನಿ ನಿರೀಕ್ಷತ್ ರೈ, ಅಮರಮುಡ್ನೂರು ಪಂಚಾಯತ್ ಪಿ.ಡಿ.ಒ ದಯಾನಂದ ಪತ್ತುಕುಂಜ, ಹಿರಿಯರಾದ ಶ್ರೀಮತಿ ಸರೋಜಿನಿ, ಗೋಪಾಲಕೃಷ್ಣ, ಯೋಗ ಗುರು ಸಂತೋಷ್ ಮುಂಡಕಜೆ, ಮೂಕಾಂಬಿಕಾ ಟ್ರೇಡರ್ಸ್
ಮಾಲಕರಾದ ಮಂಜುನಾಥ್, ಮೂಕಾಂಬಿಕಾ ಹೋಟೆಲ್ ಮಾಲಕಿ ಶ್ರೀಮತಿ ಅನಿತಾ ಮಂಜುನಾಥ್ ಉಪಸ್ಥಿತರಿದ್ದರು. ರಮ್ಯಶ್ರೀ ಸೋಣಂಗೇರಿ ಸ್ವಾಗತಿಸಿದರು. ಕು.ಮೋನಿಷಾ ವಂದಿಸಿದರು.
ನೂತನ ಮಳಿಗೆಯಲ್ಲಿ ಪುರುಷರ, ಮಹಿಳೆಯರ ಹಾಗೂ ಮಕ್ಕಳ ಬ್ರಾಂಡೆಡ್ ಸಿದ್ಧ ಉಡುಪುಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.