ಅಧ್ಯಕ್ಷರಾಗಿ ರಾಜೇಶ್ ಭಟ್ ಬಾಂಜಿಕೋಡಿ ಆಯ್ಕೆ
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ರಾಜೇಶ್ ಭಟ್ ಬಾಂಜಿಕೋಡಿ ಆಯ್ಕೆಯಾಗಿದ್ದಾರೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿತ್ತು.
ಅಧ್ಯಕ್ಷತೆಗೆ ಶಿವರಾಮ ನೆಕ್ರೆಪ್ಪಾಡಿ ಹಾಗೂ ರಾಜೇಶ್ ಭಟ್ ಬಾಂಜಿಕೋಡಿ ಆಕಾಂಕ್ಷಿಯಾಗಿದ್ದರು. ಇದು ಬ್ಲಾಕ್ ಕಾಂಗ್ರೆಸ್ ಗೆ ತಿಳಿದು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಹಾಗೂ ಸುರೇಶ್ ಅಮೈಯವರು ಐವರ್ನಾಡಿಗೆ ಜ.11 ರಂದು ಭೇಟಿ ಭೇಟಿ ನೀಡಿ ಎಲ್ಲ 9 ಮಂದಿ ಸದಸ್ಯರ ಅಭಿಪ್ರಾಯ ಪಡೆದು ಬಂದಿದ್ದರು.
ಜ.13ರಂದು ನೂತನ ಅಧ್ಯಕ್ಷರ ಆಯ್ಕೆಗೆ ದಿನ ನಿಗದಿ ಮಾಡಲಾಗಿದ್ದು 9 ಮಂದಿ ನಿರ್ದೇಶಕರು ಹಾಗೂ ವೀಕ್ಷಕರಾಗಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಸುರೇಶ ಅಮೈ ಬಂದಿದ್ದರು. ರಾಜೇಶ್ ಭಟ್ ಹಾಗೂ ಶಿವರಾಮರು ಅಧ್ಯಕ್ಷತೆಯಿಂದ ಹಿಂದೆ ಸರಿಯದಿದ್ದುದರಿಂದ ಚುನಾವಣೆಗೆ ನಿರ್ಧರಿಸಲಾಯಿತು. ಇದಕ್ಕೆ ಇಬ್ಬರೂ ಒಪ್ಪಿಕೊಂಡರು. ಬಳಿಕ ಗುಪ್ತ ಮತದಾನ ಪ್ರಕ್ರಿಯೆ ನಡೆಯಿತು.
ಮತ ಎಣಿಕೆ ಸಂದರ್ಭ ರಾಜೇಶ್ ಭಟ್ ಬಾಂಜಿಕೋಡಿ ಯವರು ಹೆಚ್ಚು ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.
ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ,ಕರುಣಾಕರ ಉದ್ದಂಪಾಡಿ,ಶ್ರೀಮತಿ ಶೀಲಾವತಿ ಕುಳ್ಳಂಪಾಡಿ, ಶ್ರೀಮತಿ ಆಶಾ ಮಡ್ತಿಲ, ರಾಧಾಕೃಷ್ಣ ಚಾಕೋಟೆ, ಬಾಲಕೃಷ್ಣ ಮಡ್ತಿಲ ಬಿಎಸ್ಸೆನ್ನೆಲ್, ಮುರಳೀಧರ ಕೊಚ್ಚಿ ರವರು ಭಾಗವಹಿಸಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷತೆಗೆ ನಾನು ಆಕಾಂಕ್ಷಿಯಾಗಿದ್ದೆ. ವೀಕ್ಷಕರು ಬಂದಿದ್ದಾಗಲೂ ತಿಳಿಸಿದ್ದೆ. ಎಲ್ಲರ ಅಭಿಪ್ರಾಯ ಪಡೆದು ಒಮ್ಮತದ ಆಯ್ಕೆಮಾಡುವುದಾಗಿ ಹೇಳಿದ್ದರು. ನಿನ್ನೆ ಸಂಜೆ ಕರೆ ಮಾಡಿ ಇಂದು ಐವರ್ನಾಡಿಗೆ ಬರುವಂತೆ ಹೇಳಿದರು. ನಾನು ಹೋಗಿದ್ದೆ. ಸುಳ್ಯದಿಂದ ಬಂದ ವೀಕ್ಷಕರು ಚುನಾವಣೆ ಮೂಲಕ ಅಧ್ಯಕ್ಷತೆ ಆಯ್ಕೆಮಾಡುವುದಾಗಿ ಹೇಳಿ, ಅವರು ತಂದಿದ್ದ ಬೆಲೆಟ್ ಪೇಪರ್ ಕೈಗಿತ್ತು ಚುನಾವಣೆ ನಡೆಸಿದರು. ಏಕಾಏಕಿ ಈ ತೀರ್ಮಾನ ಸರಿಯಲ್ಲ. ಚುನಾವಣೆ ನಡೆಸುವುದಿದ್ದರೆ ಮೊದಲೇ ತಿಳಿಸಬೇಕಿತ್ತು ಎಂದು ಶಿವರಾಮ ನೆಕ್ರೆಪ್ಪಾಡಿ ಸುದ್ದಿಗೆ ತಿಳಿಸಿದ್ದಾರೆ.