ಶ್ರೀಮತಿ ಪಾರ್ವತಿ -ಕಾಪಡ್ಕ ಕುರಿಯ ನಿಧನ

0

ಮುಪ್ಪೇರ್ಯ ಗ್ರಾಮದ ಕಾಪಡ್ಕ ಕುರಿಯ ಪುಟ್ಟಣ್ಣ ನಾಯ್ಕ ರವರ ಪತ್ನಿ ಶ್ರೀಮತಿ ಪಾರ್ವತಿ ರವರು ಅಲ್ಪ ಕಾಲದ ಅಸೌಖ್ಯದಿಂದ ಜ.13 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರುಷ ವಯಸ್ಸಾಗಿತ್ತು. ಮೃತರು ಪತಿ , ಪುತ್ರರಾದ ಸುರೇಶ್, ಜಯರಾಮ, ರಮೇಶ, ಪುತ್ರಿ ಶ್ರೀಮತಿ ಮೀನಾಕ್ಷಿ ಬಾಲಕೃಷ್ಣ ಬೊಮ್ಮೆಟಿ, ಸೊಸೆಯಂದಿರು, ಅಳಿಯ , ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.