ಮಣಿಮಜಲು ಗರಡಿಯಲ್ಲಿ ಬ್ರಹ್ಮ ಬೈದದರುಗಳ ಮತ್ತು ಕೊಡಮಣಿತ್ತಾ ದೈವದ ನೇಮೋತ್ಸವ

0

ಕಳಂಜ‌ ಗ್ರಾಮದ ಮಣಿಮಜಲು ಗರಡಿಯಲ್ಲಿ ಬ್ರಹ್ಮ ಬೈದದರುಗಳ ಮತ್ತು ಕೊಡಮಣಿತ್ತಾ ದೈವದ ನೇಮೋತ್ಸವ ಫೆ. 22ರಂದು ನಡೆಯಿತು.


ಬೆಳಿಗ್ಗೆ ನಾಗ ತಂಬಿಲ,‌ ತೋರಣ ಮುಹೂರ್ತ, ಕಲಶ ಶುದ್ಧಿ, ಮುಡಿಪು, ಕೊಡಮಣಿತ್ತಾಯ ದೈವಕ್ಕೆ ಗಗ್ಗರ‌ ಸೇವೆ, ನೇಮೋತ್ಸವ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ ಬೈದರುಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ ಬಳಿಕ ಬೈದರ್ಕಳರು ಗರಡಿ ಇಳಿಯುವುದು, ಮಾನಿಬಾಲೆ ದೇವಿಯ ಉತ್ಸವ, ಮುಂಜಾನೆ ಬೈದರ್ಕಳ ದರ್ಶನ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು. ಇಂದು ಸಂಜೆ 6 ಗಂಟೆಯಿಂದ ಸುವರ್ಣ ಕುಟುಂಬಸ್ಥರ ತರವಾಡು ಮನೆಯ ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ಬಳಿಕ ನೇಮೋತ್ಸವ ಜರಗಲಿದೆ.