ಐವರ್ನಾಡು : ಎಡಮಲೆ ಭೂಮಿ ದೈವ ಮತ್ತು ಪರಿವಾರ ದೈವಗಳ ದೈವಸ್ಥಾನ

0

ನವೀಕರಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಫೆ.27 ಮತ್ತು ಫೆ .28 ರಂದು ದೈವಗಳ ನೇಮ ನಡಾವಳಿ

ಮಿತ್ತಮೂಲೆ ಎಡಮಲೆ ಕುಟುಂಬದ ಎಡಮಲೆ ಭೂಮಿ ದೈವ ಮತ್ತು ಪರಿವಾರ ದೈವಗಳ ದೈವಸ್ಥಾನ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.25 ರಂದು ವಿವಿಧ ಧಾರ್ಮಿಕ ಮತ್ತು ದೈವಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಫೆ.27 ಮತ್ತು ಫೆ.28 ರಂದು ದೈವಗಳ ನೇಮ ನಡಾವಳಿ ನಡೆಯಲಿದೆ.


ಫೆ.25 ರಂದು ಸಂಜೆ ,6.30 ರಿಂದ ದೇವತಾ ಪ್ರಾರ್ಥನೆ,ಆಚಾರ್ಯವರಣೆ,ಸ್ವಸ್ತಿ ಪುಣ್ಯಾಹ ವಾಚನ,ಸ್ಥಳಶುದ್ಧಿ,ಪ್ರಾಸಾದ ಶುದ್ದಿ,ರಕ್ಷೋಘ್ನ ಹೋಮ,ವಾಸ್ತುಹೋಮ,ವಾಸ್ತುಪೂಜಾಬಲಿ,ನೂತನ ಬಿಂಬ ಜಲಾಧಿವಾಸ,ಪ್ರಾಕಾರ ದಿಕ್ಬಲಿ,ಪ್ರಸಾದ ವಿತರಣೆ ನಡೆಯಿತು.


ಫೆ.26 ರಂದು ಪ್ರಾತ:ಕಾಲ ಮಹಾಗಣಪತಿ ಹೋಮ,ಪಂಚವಿಂಶತಿ ಕಲಶಪೂಜೆ ನಡೆಯಿತು.
ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿ,ಶಿರಾಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ನಡೆಯಿತು.


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಎಡಮಲೆ,ಕಾರ್ಯದರ್ಶಿ ದೀಕ್ಷಿತ್ ಮಿತ್ತಮೂಲೆ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಗೌಡ ನೂಜಾಲು,ಕಾರ್ಯದರ್ಶಿ ದಿನೇಶ್ ಎಡಮಲೆ, ಕೋಶಾಧಿಕಾರಿ ಸತೀಶ್ ಎಡಮಲೆ, ಕುಟುಂಬದ ಯಜಮಾನ ಪದ್ಮಯ್ಯ ಗೌಡ ಮಿತ್ತಮೂಲೆ,ಮನೆಯ ಯಜಮಾನ ಗುರುಪ್ರಸಾದ್ ಎಡಮಲೆ,ಮಿತ್ತಮೂಲೆ ಎಡಮಲೆ ಕುಟುಂಬದ ಆದಿಮನೆ ಯಜಮಾನ ಲಕ್ಷ್ಮಣ ಗೌಡ ಮಿತ್ತಮೂಲೆ,ದೈವದ ಪಾತ್ರಿ ಲೋಕೇಶ್ ಎಡಮಲೆ ಗೌರವ ಸಲಹೆಗಾರರಾದ ಗಂಗಾಧರ ಗೌಡ ಎಡಮಲೆ,ಕರುಣಾಕರ ಗೌಡ ಬರೆಮೇಲು,ರಾಧಾಕೃಷ್ಣ ಗೌಡ ಎಡಮಲೆ ಅಮೈ, ಕುಶಾಲಪ್ಪ ಗೌಡ ಎಡಮಲೆ,ಗೋಪಾಲಕೃಷ್ಣ ಗೌಡ ಬೀದಿಗುಡ್ಡೆ, ಬಾಲಚಂದ್ರ ಸಾರಕರೆ ಹಾಗೂ ಕುಟುಂಬದ ಸಮಸ್ತರು ಉಪಸ್ಥಿತರಿದ್ದರು.


ಸಾನ್ನಿಧ್ಯ ಕಲಶಾಭಿಷೇಕ,ತಂಬಿಲ ಸೇವೆ,ಮಂಗಳಾರತಿ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ.
ಫೆ.27 ರಂದು ಸಂಜೆ 4.00 ರಿಂದ ಭಂಡಾರ ತೆಗೆದು ಬಿರ್ಮೆರ್ ,ಸತ್ಯಜಾವತೆ,ಕಲ್ಲುರ್ಟಿ ದೈವಗಳಿಗೆ ನೇಮ ನಡೆಯಲಿದೆ.
ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.


ಬಳಿಕ ಕುಕ್ಕೆತ್ತಿಬಲ್ಲು, ವರ್ಣಾರ ಪಂಜುರ್ಲಿ, ಕುಪ್ಪೆಪಂಜುರ್ಲಿ, ಜಾಲ ಕೊರತ್ತಿ, ಪಿಲಿಭೂತ ನೇಮ ನಡೆಯಲಿದೆ.
ಫೆ.28 ರಂದು ಬೆಳಿಗ್ಗೆ ಗಂಟೆ 6.00 ರಿಂದ ರುದ್ರಚಾಮುಂಡಿ, ಶಿರಾಡಿ ದೈವಗಳ ನೇಮ ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ‌
ನಂತರ ಗುಳಿಗ, ಅಂಗಾರಬಾಕುಡ ದೈವಗಳಿಗೆ ನೇಮ ನಡೆಯಲಿದೆ.