ಬೆಳ್ಳಾರೆ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ನ ಮಹಾಸಭೆ,ನೂತನ ಸಮಿತಿ ರಚನೆ

0

ಬೆಳ್ಳಾರೆ ಸಮಾಜ ಸೇವಾ ಸಂಘಟನೆಯಾದ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ಇದರ ಮಹಾಸಭೆ ಫೆ 28 ರಂದು ಟ್ರಸ್ಟ್ ನ ಅದ್ಯಕ್ಷ ಯು ಹೆಚ್ ಅಬೂಬಕ್ಕರ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ಸಾಲಿನ ವರದಿ ವಾಚನ ಮಂಡನೆಯ ಬಳಿಕ ಮುಂದಿನ ಕಾರ್ಯ ಯೋಜನೆಯ ಗಳ ಕುರಿತು ಚರ್ಚೆ ನಡೆಯಿತು. ಬಳಿಕ ಈ ಹಿಂದಿನ ಆಡಳಿತ ಸಮಿತಿಯನ್ನು ಬರ್ಕಾಸ್ತು ಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ, ಪ್ರಧಾನ ಕಾರ್ಯದರ್ಶಿ ಜಮಾಲುದ್ದ್ದೀನ್ ಕೆ‌ ಎಸ್,
ಕೋಶಾಧಿಕಾರಿಯಾಗಿ ಸಿದ್ದೀಕ್ ಮಾಲೆಂಗಿ, ಉಪಾಧ್ಯಕ್ಷರುಗಳಾಗಿ ಜಕರಿಯಾ ನಿಡ್ಮಾರ್, ಅಶ್ರಫ಼್ ಪ್ರಗತಿ, ಕಲಂದರ್ ಹಾಜಿ, ಜೊತೆ ಕಾರ್ಯದರ್ಶಿ. ಕಮಾಲ್ ಪೆರುವಾಜೆ ಆಯ್ಕೆಯಾದರು.

ಹಾಗೂ ಸುಮಾರು 33 ನೂತನ ಟ್ರಸ್ಟೀಗಳನ್ನು ನೇಮಿಸಲಾಯಿತು. ಸಭೆಯಲ್ಲಿ‌ ನೂರಾರು ಮಂದಿ ಸದಸ್ಯರು‌ ಭಾಗವಹಿಸಿದ್ದರು.