ಶಾಂತಿನಗರ ಸರಕಾರಿ ಶಾಲೆಯಲ್ಲಿ ಬೋರ್‌ವೆಲ್ ಉದ್ಘಾಟನೆ

0

ಬೋರ್ವೆಲ್ ನಿರ್ಮಿಸಿ ಕೊಡುಗೆ ನೀಡಿದ ಜಮಾಅತೆ ಇಸ್ಲಾಮಿ ಹಿಂದ್ ಸಮಾಜ ಸೇವ ಘಟಕ ಮಂಗಳೂರು

ಸುಳ್ಯ ಶಾಂತಿನಗರ ಸ.ಉ.ಹಿ.ಪ್ರಾ ಶಾಲೆಗೆ ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕ ವತಿಯಿಂದ ಕೊಡುಗೆಯಾಗಿ ನಿರ್ಮಿಸಿದ ಬೋರ್‌ವೆಲ್ ಉದ್ಘಾಟನಾ ಕಾರ್ಯಕ್ರಮ ಮಾ.೦೨ರಂದು ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ನಝೀರ್ ಶಾಂತಿನಗರ ಧಾನಿಗಳ ಹೆಸರಿನ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿ ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕ ಮಂಗಳೂರು ಇದರ ವತಿಯಿಂದ ಸರಕಾರಿ ಶಾಲೆಗಳನ್ನು ಉಳಿಸು ಬೆಳೆಸುವ ಉದ್ದೇಶದಿಂದ ನಮ್ಮ ಶಾಲೆಗೆ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ನೀರನ್ನು ಬೋರ್‌ವೆಲ್ ಮೂಲಕ ಕೊರೆಸಿ ನೀಡುವ ಮೂಲಕ ಸಹಕರಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು.

ಊರಿನ ಹಿರಿಯರಾದ ಗೋಪಾಲಕೃಷ್ಣ ಭಟ್ ತೆಂಗು ಗಿಡಕ್ಕೆ ನೀರು ಹಾಯಿಸಿ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಶಾಲೆಗೆ ಬೋರ್‌ವೆಲ್ ಒದಗಿಸುವಲ್ಲಿ ಕಾರಣರಾದ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಇದರ ಸಂಚಾಲಕ ಅಬ್ದುಲ್ ಗಫೂರ್ ಮಾತನಾಡಿ ಸಂಘಟನೆಯ ಸಮಾಜ ಸೇವಾ ಘಟಕದ ವತಿಯಿಂದ ಈ ಸೇವೆಯನ್ನು ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಶಾಲೆಯ ಆಡಳಿತ ಮಂಡಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ತುಳಸಿ ಕೆ ಪ್ರಾಸ್ತಾವಿಕ ಮಾತನಾಡಿ ಸಂಘಟನೆಯ ಸಹಕಾರವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ದೀಪಾಂಜಲಿ ಮಹಿಳಾ ಮಂಡಲ ಸ್ಥಾಪಕ ಅಧ್ಯಕ್ಷೆ ಹರ್ಷ ಕರುಣಾಕರ ಸೇರ್ಕಜೆ,ಸ್ಥಳೀಯ ಮುಖಂಡರಾದ ಸಮಾಜ ಸೇವಕ ತ್ವಾಹ ಪೈಚಾರ್,ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದ ಮುಖ್ಯಸ್ಥರುಗಳಾದ ಸಿದ್ಧೀಕ್ ಜಕ್ರಿಬೆಟ್ಟು, ಅಬ್ದುಲ್ ವಾಹಿದ್ ಮಂಗಳೂರು, ಶಾಲಾ ಹಿರಿಯ ವಿದ್ಯಾರ್ಥಿ ಆಶ್ರಫ್ ಸುಳ್ಯ, ಇಬ್ರಾಹಿಂ ಅಜ್ಜಾವರ, ಶಾಲಾ ಸಹ ಶಿಕ್ಷಕಿಯರಾದ ಪಾರ್ವತಿ ಎನ್, ರಮ್ಯಶ್ರೀ, ಗುಣಶ್ರೀ,ಅಂಗನವಾಡಿ ಶಿಕ್ಷಕಿ ಶ್ರೀಮತಿ ಇಂದಿರಾ ಮಂಚಿ, ಫೋಷಕ ವೃಂದದವರು, ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿ ಮುಖ್ಯ ಶಿಕ್ಷಕಿ ಸ್ವಾಗತಿಸಿ ದೈಹಿಕ ಶಿಕ್ಷಕ ರಘುನಾಥ್ ಯು. ವಂದಿಸಿದರು.
ಕೊನೆಯಲ್ಲಿ ಸಂಘಟನೆಯ ವತಿಯಿಂದ ವಿದ್ಯಾರ್ಥಿಗಳಿಗೆ, ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿ ತಿಂಡಿ ಮತ್ತು ತಂಪು ಪಾನೀಯ ವಿತರಣೆ ನಡೆಯಿತು.