ಅರಂತೋಡು ಮದರಸ ವತಿಯಿಂದ ಮುಸಾಬಕ ಸಾಹಿತ್ಯ ಸ್ಪರ್ದೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

0

ಇತ್ತೀಚೆಗೆ ಪುತ್ತೂರಿನ ಪರ್ಲಡ್ಕದಲ್ಲಿ ನಡೆದ ರಾಜ್ಯಮಟ್ಟದ ಮುಸಾಬಕ ಕಲಾ ಸಾಹಿತ್ಯೋತ್ಸವದಲ್ಲಿ ಜೂನಿಯರ್ ಆರೇಬಿಕ್ ಬರವಣಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅರಂತೋಡು ನುಸ್ರತ್ತುಲ್ ಇಸ್ಲಾಂ ಮದರಸದ ವಿದ್ಯಾರ್ಥಿ ಮಹಮ್ಮದ್ ಹಫೀಝ್ ಹಾಗೂ ಜಿಲ್ಲಾ ಮಟ್ಟದ ಕಲಾ ಸಾಹಿತ್ಯ ಸ್ಪರ್ಧೆ ಡ್ರಾಯಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದ ಮಹಮ್ಮದ್ ನವಾಝ್ ಪಿ ಇವರನ್ನು ಮಾ.2 ರಂದು ನುಸ್ರತ್ತುಲ್ ಇಸ್ಲಾಂ ಮದರಸ ಮ್ಯಾನೇಜ್‌ಮೆಂಟ್ ಹಾಗೂ ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರವತಿಯಿಂದ ಸನ್ಮಾನಿಸಲಾಯಿತು. ಸನ್ಮಾನವನ್ನು ಸುಳ್ಯ ತಾಲೂಕು ಜಮೀಯತ್ತುಲ್ ಮುಅಲ್ದೀಮೀನ್ ಅಧ್ಯಕ್ಷರಾದ ಬಹು ಅಬ್ದುಲ್ ಖಾದರ್ ಫೈಝಿ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.

ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಆಶ್ರಫ್ ಗುಂಡಿ ವಹಿಸಿದ್ದರು. ದುವಾಃ ಮತ್ತು ಪ್ರಸ್ತಾವನೆಯನ್ನು ಬಹು| ನೌಶಾದ್ ಅಝ್‌ಹರಿರವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಅಧ್ಯಾಪಕ ಶಾಫಿ ಮುಸ್ಲಿಯಾರ್, ಜುಮಾ ಅತ್ ಕಾರ್ಯದರ್ಶಿ ಕೆ.ಎಂ ಮುಸಾನ್, ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್, ತಾಲೂಕು ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ನಿವೃತ್ತ ಉಪನ್ಯಾಸಕ ಅಬ್ದುಲ್ಲ ಮಾಸ್ತರ್, ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್, ಕೆ.ಎಂ ಮೊಯೀದು ಕುಕ್ಕುಂಬಳ, ಮುಜೀಬ್ ಅರಂತೋಡು, ಕೆ,ಎಂ ಉಸ್ಮಾನ್, ಮನ್ಸೂರ್ ಪಾರೆಕ್ಕಲ್, ಎ ಹನೀಫ್, ಅಬ್ದುಲ್ ರಹಿಮಾನ್ ಪಠೇಲ್, ಫಸೀಲು, ಹಕೀಮ್ ಕೋಡಂಕೇರಿ, ಅಝರುದ್ದೀನ್ ಅಜ್‌ಮಲ್ ಕುಕ್ಕುಂಬಳ, ಶಹಬಾನ್, ಮಾಹೀನ್ ಸಂಟ್ಯಾರ್, ಮೊಯೀದುಕುಟ್ಟಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.