ಡಾ. ಪುನೀತ್ ರಾಜ್ ಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಸಂಕೇಸದ ಪುನೀತ್ ರಿಂದ ರಕ್ತದಾನ ಹಾಗೂ ಉಚಿತ ಅಟೋ ಪ್ರಯಾಣ

0

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ದಿ. ಡಾ.ಪುನೀತ್ ರಾಜ್‍ಕುಮಾರ್ ರವರ ಅಭಿಮಾನಿ ಅಮರಮುಡ್ನೂರು ಗ್ರಾಮದ ಪುನೀತ್ ಸಂಕೇಸ ರವರು ರಕ್ತದಾನ ಮಾಡುವುದರೊಂದಿಗೆ ಕುಕ್ಕುಜಡ್ಕದಿಂದ ಸುಳ್ಯ ಆಸ್ಪತ್ರೆಗೆ ತೆರಳುವ ಪ್ರಯಾಣಿಕರನ್ನು ತನ್ನ ( ಶ್ರೀ ದುರ್ಗಾ) ಅಟೋ ದಲ್ಲಿ‌ ಉಚಿತವಾಗಿ ಕರೆದುಕೊಂಡು ಬರುವ ಮೂಲಕ ವಿಶಿಷ್ಟ ರೀತಿಯಲ್ಲಿ ಡಾ. ಪುನೀತ್ ರಾಜ್‍ಕುಮಾರ್ ರವರ ಹುಟ್ಟು ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಎನ್.ಎಸ್.ಎಸ್.ಕ್ಯಾಂಪ್ ನಲ್ಲಿ ಇರುವ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ವಿತರಿಸಿದರು.